ಭಾನುವಾರ ಸುರಿದ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯ ಪರಿಣಾಮವಾಗಿ ಧಾರವಾಡ ತಾಲೂಕಿನ ಲಂಡಿಕಾ ಹಳ್ಳ ತುಂಬಿ ಹರಿದು ಕಿರು ಸೇತುವೆ ಮುಳುಗಡೆಯಾಗಿ, ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಧಾರವಾಡ ನಗರ ಮತ್ತು ತಾಲೂಕಿನಾದ್ಯಾಂತ ಭಾನುವಾರ ಮಧ್ಯಾಹ್ನದ ವೇಳೆ ಧಾರಾಕಾರ ಮಳೆಯಾಗಿದೆ. ತಾಲೂಕಿನ ಹೆಬ್ಬಳ್ಳಿಯಿಂದ ಮಾರಡಗಿ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯದ ಲಂಡಿಕಾ ಹಳ್ಳ ತುಂಬಿ ಹರಿದ ಪರಿಣಾಮ ಕಿರು ಸೇತುವೆ ಮುಳುಗಡೆಯಾಗಿತ್ತು. ಇದರ ಪರಿಣಾಮ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಇದನ್ನು ಓದಿದ್ದೀರಾ? ಗದಗ | ಬಾರಿ ಮಳೆ : ಬೇಕರಿಗೆ ನುಗ್ಗಿದ ನೀರು
ಇದೇ ವೇಳೆ ಲೋಕೋಪಯೋಗಿ ಇಲಾಖೆ ಮೇಲೆ ಸ್ಥಳೀಯರು ಆಕ್ರೋಶಗೊಂಡರು.