ಈಜಲು ಭೀಮಾ ನದಿಗೆ ಇಳಿದಿದ್ದ ಯುವಕ ನೀರಿನಲ್ಲಿ ನಾಪತ್ತೆಯಾದ ಘಟನೆ ಭಾನುವಾರ ಜೇವರ್ಗಿ ತಾಲ್ಲೂಕಿನ ಕೋನಾಹಿಪ್ಪರಗಿ-ಸರಡಗಿ ಬ್ರಿಡ್ಜ್ ಸಮೀಪ ಭಾನುವಾರ ಬೆಳಿಗ್ಗೆ ನಡೆದಿದೆ.
ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆ ಬಡಾವಣೆಯ ನಿವಾಸಿ ಮಹಾದೇವ ರೇವಪ್ಪ ಬೆಡಜುರ್ಗಿ (18) ನದಿ ಪಾಲಾದ ಯುವಕ ಎಂದು ತಿಳಿದು ಬಂದಿದೆ.
ಕಲಬುರಗಿಯಿಂದ ಐದು ಜನ ಸ್ನೇಹಿತರು ಭೀಮಾ ನದಿಯಲ್ಲಿ ಈಜಾಡಲು ಬಂದಿದ್ದರು. ಈ ವೇಳೆ ಈಜು ಬಾರದೇ ಮಹಾದೇವ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕಾಲ್ತುಳಿತ ಪ್ರಕರಣ | ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ 25 ಲಕ್ಷ ರೂ.ಗಳಿಗೆ ಹೆಚ್ಚಳ
ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಜೆ ಜೇವರ್ಗಿ ಸಿಪಿಐ ರಾಜೇಸಾಬ ನದಾಫ್, ಪಿಎಸ್ಐ ಗಜಾನಂದ ಬಿರಾದಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.