ಮಾಜಿ ಉಪಮುಖ್ಯಮಂತ್ರಿ ಅಥಣಿ ವಿಧಾನ ಸಭಾ ಶಾಸಕರಾದ ಲಕ್ಷ್ಮಣ ಸವದಿ ತೆರಳುತ್ತಿದ್ದ ಕಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಘಟನೆಯ ಕುರಿತು ಶಾಸಕ ಲಕ್ಷ್ಮಣ ಸವದಿ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅಪಘಾತದ ಕುರಿತು ಪ್ರಕಟನೆ ನೀಡಿರುವ ಶಾಸಕ ಲಕ್ಷ್ಮಣ ಸವದಿಯವರು ಇಂದು ಸಂಜೆ ಬೆಳಗಾವಿ ಮೂಲಕ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ದರೂರ ಗ್ರಾಮದ ಹತ್ತಿರ ನನ್ನ ವಾಹನ ಚಿಕ್ಕ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಯಾರಿಗೂ ಪ್ರಾಣ ಅಪಾಯವಾಗಿಲ್ಲ
ಭಗವಂತ ಹಾಗೂ ಶ್ರೀ ಶಿವಯೋಗಿಗಳ ಕೃಪಾಶೀರ್ವಾದ ಹಾಗೂ ಎಲ್ಲ ಹರ ಗುರು ಚರಮೂರ್ತಿಗಳ ಹಾಗೂ ಕ್ಷೇತ್ರದ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಸುರಕ್ಷಿತವಾಗಿದ್ದೆನೆ.

ಯಾರು ಆತಂಕ ಪಡುವ ಅಗತ್ಯವಿಲ್ಲ ಇವಾಗ ಸದ್ಯ ನಾನು ಕೆಲಸದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದು ಬೆಂಗಳೂರಿನಿಂದ ಬಂದ ನಂತರ ಗೃಹ ಕಛೇರಿಯಲ್ಲಿ ತಮ್ಮಲ್ಲರನ್ನು ಭೇಟಿಯಾಗುತ್ತೇನೆ. ನಿಮ್ಮೆಲ್ಲರ ಪ್ರೀತಿಯ ಕಾಳಜಿಗೆ ನಾನು ಚಿರಋಣಿಯಾಗಿದ್ದೇನೆ. ಇಂತಿ ನಿಮ್ಮ ಪ್ರೀತಿಯ ಲಕ್ಷ್ಮಣ ಸವದಿ. ಎಂದು ತಿಳಿಸಿದ್ದಾರೆ.