ಶಿವಮೊಗ್ಗ ಜಿಲ್ಲಾ ಹೊಸನಗರ ಸಮೀಪವಿರುವ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜೇನುಕಲ್ಲಮ್ಮ (ಅಮ್ಮನಘಟ್ಟ ಗುಡ್ಡ ಕೋಡೂರು) ಗುಡ್ಡದಲ್ಲಿ ಟ್ರಕ್ಕಿಂಗ್ (ಚಾರಣ)ವನ್ನು. ದಿನಾಂಕಃ 09-06-2025 ರ ಇಂದು ಬೆಳಗ್ಗೆ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ,

ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2, ಶಿವಮೊಗ್ಗ ಜಿಲ್ಲೆ, ಅರವಿಂದ್ ಕಲಗುಜ್ಜಿ ಡಿವೈಎಸ್ಪಿ, ತೀರ್ಥಹಳ್ಳಿ ಉಪ ವಿಭಾಗ, ಕೇಶವ್ ಡಿವೈಎಸ್ಪಿ, ಶಿಕಾರಿಪುರ ಉಪ ವಿಭಾಗ ಹಾಗೂ ತೀರ್ಥಹಳ್ಳಿ, ಶಿಕಾರಿಪುರ ಮತ್ತು ಸಾಗರ ಉಪ ವಿಭಾಗದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳನ್ನೊಳಗೊಂಡ ತಂಡದೊಂದಿಗೆ,
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಸದೃಡತೆಯ ಹಿತದೃಷ್ಟಿಯಿಂದ ಮತ್ತು ಒತ್ತಡ ನಿರ್ವಹಣೆಯ ಹಿನ್ನೆಲೆಯಲ್ಲಿ,ಟ್ರಕ್ಕಿಂಗ್ ಕೈಗೊಳ್ಳಲಾಗಿತ್ತು.