ವಲಸಿಗರ ಶೋಧ ಕಾರ್ಯಾಚರಣೆ ವಿರುದ್ಧವಾಗಿ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಆಡಳಿತವು ಹೆಚ್ಚುವರಿಯಾಗಿ 2000 ನ್ಯಾಷನಲ್ ಗಾರ್ಡ್ಸ್(ಭದ್ರತಾ ಸಿಬ್ಬಂದಿ) ಮತ್ತು 700 ನೌಕಾಪಡೆ ಸಿಬ್ಬಂದಿ ನಿಯೋಜಿಸಿದೆ.
ಅಮೆರಿಕದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಲಾಸ್ ಏಂಜಲೀಸ್‌ನಲ್ಲಿ ವಲಸಿಗರನ್ನು ಹೊರದಬ್ಬುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಲಸಿಗರನ್ನು ಹಿಡಿದಿಟ್ಟಿರುವ ಫೆಡರಲ್ ಬಂಧನ ಕೇಂದ್ರದ ಹೊರಗೆ ಪ್ರತಿಭಟನೆ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಅಮೆರಿಕದಿಂದ ಗಡಿಪಾರಾದ 104 ಅಕ್ರಮ ವಲಸಿಗರು ಭಾರತಕ್ಕೆ ವಾಪಸ್
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ 2,000 ನ್ಯಾಷನಲ್ ಗಾರ್ಡ್ಸ್ ಸಿಬ್ಬಂದಿ ನಿಯೋಜಿಸಿದ್ದಾರೆ. ಆದರೆ ಟ್ರಂಪ್ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. “ಟ್ರಂಪ್‌ನ ಈ ಕ್ರಮ ಅಜಾಗರೂಕ ಮತ್ತು ನಮ್ಮ ಯೋಧರಿಗೆ ಅಗೌರವ” ಎಂದು ಕ್ಯಾಲಿಫೋರ್ನಿಯಾದ ಗವರ್ನರ್ ಗ್ಯಾವಿನ್ ನ್ಯೂಸಮ್ ಹೇಳಿದ್ದಾರೆ. ಟ್ರಂಪ್ ನಡೆನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
BREAKING: An enormous peaceful protest has broken out in Los Angeles in defiance of Donald Trump’s ICE raids. This is how it’s done. pic.twitter.com/HQeRwMrlnd
— Democratic Wins Media (@DemocraticWins) June 8, 2025
ಒಂದೆಡೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಫ್ಲ್ಯಾಷ್ ಬ್ಯಾಂಗ್ ಮತ್ತು ರಬ್ಬರ್ ಗುಂಡುಗಳ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇನ್ನೊಂದೆಡೆ ಪ್ರತಿಭಟನಾಕಾರರು ಕಾರುಗಳಿಗೆ ಬೆಂಕಿ ಹಚ್ಚಿ ಹೆದ್ದಾರಿ ಸಂಚಾರಕ್ಕೆ ತಡೆ ಮಾಡುತ್ತಿದ್ದಾರೆ. ಅಲ್ಲಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯುತ್ತಿದೆ ಎಂದು ವರದಿಯಾಗಿದೆ.
