ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಲುಲು ಮಾಲ್ ವತಿಯಿಂದ ಪ್ರತಿನಿತ್ಯವೂ ನಮ್ಮ ಪರಿಸರವನ್ನು ಸ್ವಚ್ಛಗೊಳಿಸಿ, ಪರಿಸರವನ್ನು ಕಾಪಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಎಲೆಮರೆ ಕಾಯಿಯಂತಿರುವ ಪರಿಸರ ವೀರರನ್ನು ಸನ್ಮಾನಿಸುವ ಸಲುವಾಗಿ ಲುಲು ಮಾಲ್ ಬೆಂಗಳೂರು ವತಿಯಿಂದ 2025ರ ವಿಶ್ವ ಪರಿಸರ ದಿನವನ್ನು ಈ ಹೃದಯಸ್ಪರ್ಶಿ ಸನ್ಮಾನ ಸಮಾರಂಭದೊಂದಿಗೆ ಆಚರಿಸಿತು.
ಬೆಂಗಳೂರು ನಗರವನ್ನು ಸ್ವಚ್ಛವಾಗಿಡಿ, ನಗರವನ್ನು ಹಸಿರಾಗಿಡಿ ಎಂಬ ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮವು, ನಗರದ ಸ್ವಚ್ಛತೆ ಮತ್ತು ಸುಸ್ಥಿರತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರು ವಹಿಸುವ ಅನಿವಾರ್ಯ ಪಾತ್ರವನ್ನು ಉತ್ಸಾಹದಿಂದ ಗುರುತಿಸಿದ್ದು, ಹಸಿರು ದಳ ಮತ್ತು ಗ್ರೀನ್ ಮೈಕ್‌ನ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಪರಿಸರವಾದಿಗಳು, ಸ್ಥಳೀಯ ಅಧಿಕಾರಿಗಳು, ಕಾರ್ಪೊರೇಟ್ ಪ್ರತಿನಿಧಿಗಳು ಮತ್ತು ಪೌರ ಕಾರ್ಮಿಕ ಸಮುದಾಯದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ವಾಲ್ ಆಫ್ ಫೇಮ್” ಎಂಬ ಶಾಶ್ವತ ಫಲಕವೊಂದನ್ನು ಉದ್ಘಾಟಿಸಲಾಯಿತು. ಈ “ವಾಲ್ ಆಫ್ ಫೇಮ್”ನಲ್ಲಿ ರಸ್ತೆಯನ್ನು ಶುಚಿಗೊಳಿಸುವ ಕಾರ್ಮಿಕರ ಕಥೆಗಳು, ಚಿಂತನೆಗಳು, ಅವರ ಹೋರಾಟಗಳು, ಸ್ಥಿರತೆ ಮತ್ತು ಬೆಂಗಳೂರಿನ ಕಸ ವಿಲೇವಾರಿಗೆ ನೀಡಿದ ಕೊಡುಗೆಗಳ ಬಗ್ಗೆ ವಿವರವುಳ್ಳದ್ದನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.
ಇದನ್ನೂ ಓದಿದ್ದೀರಾ? ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆ; ಸೇವಾ ಗುಣಮಟ್ಟ ಕುಂಠಿತ
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಗುರುತಿಸಿ ಕಸ ವಿಂಗಡಣೆ, ಸಂಗ್ರಹಣೆ, ಮತ್ತು ಪುನರ್ಬಳಕೆಯಲ್ಲಿ ಅವರ ಮಾದರಿಯ ಸೇವೆಗಾಗಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ಲುಲು ಮಾಲ್ ಬೆಂಗಳೂರಿನ ಜನರಲ್ ಮ್ಯಾನೇಜರ್ ಕಿರಣ್ ವಿ ಪುತ್ರನ್ ಮಾತನಾಡಿ, “ನಮ್ಮ ಬೆಂಗಳೂರಿಗಾಗಿ ಪೌರ ಕಾರ್ಮಿಕರ ಅವಿರತ ಕೆಲಸಕ್ಕೆ ಧನ್ಯವಾದ ಸಲ್ಲಿಸಲು ಮತ್ತು ಅವರನ್ನು ಸನ್ಮಾನಿಸಲು ಹರ್ಷಿಸುತ್ತೇನೆ. ಬೆಂಗಳೂರಿನ ಪರಿಸರಲ್ಲಿ ನಡೆಯುತ್ತಿರುವ ಬದಲಾವಣೆಗಳಲ್ಲಿ ಪೌರ ಕಾರ್ಮಿಕರ ಪಾತ್ರವೂ ಬಹಳ ಬದ್ಧತೆಯಿಂದ ಕೂಡಿದೆ. ಪೌರ ಕಾರ್ಮಿಕರ ಅಗತ್ಯಗಳಿಗಾಗಿ ಎಲ್ಲ ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಕ್ತಿಗಳು ಬೆಂಬಲ ನೀಡಬೇಕೆಂದು ವಿನಂತಿಸುತ್ತೇವೆ. ಏಕೆಂದರೆ ಅವರು ನಮ್ಮ ನಗರವನ್ನು ಸ್ವಚ್ಛವಾಗಿಯೂ ಮತ್ತು ಶುಚಿಯಾಗಿಡುವ ಬೆನ್ನೆಲುಬು” ಎಂದು ತಿಳಿಸಿದರು.
