ಲಿಂಗಸೂಗೂರು ತಾಲ್ಲೂಕು ಕರಡಕಲ್ ಗ್ರಾಮದ ಮೂವರು ಅಪ್ರಾಪ್ತ ಬಾಲಕರು ನಾಪತ್ತೆಯಾದ ಘಟನೆ ನಡೆದಿದೆ.
ಕರಡಕಲ್ ಗ್ರಾಮದ ಮಂಜುನಾಥ ಪರಸಪ್ಪ ಬ್ಯಾಗಿ(14), ರೋಹಿತ್ ಗದ್ದೆಪ್ಪ ಭಜಂತ್ರಿ(14), ಪ್ರಜ್ವಲ್ ಗದ್ದೆಪ್ಪ (16) ನಾಪತ್ತೆಯಾದ ಬಾಲಕರು ಎನ್ನಲಾಗಿದೆ.ಇಬ್ಬರು 9 ನೇ ತರಗತಿ ಹಾಗೂ ಇನ್ನೋರ್ವ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಜೂನ್ 6 ರಂದು ಸಂಜೆ 7 ಗಂಟೆಗೆ ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿದ್ದರು. ವಾಪಸ್ ಬಂದಿಲ್ಲ.ಕುಟುಂಬಸ್ಥರು
ಕರಡಕಲ್ ಗ್ರಾಮ ಸೇರಿ ಸುತ್ತಮುತ್ತ ಊರುಗಳಲ್ಲಿ ಹುಡುಕಾಡಿದರೂ ಬಾಲಕರು ಸುಳಿವು ಸಿಕ್ಕಿಲ್ಲ.ಮೂರು ದಿನಗಳ ನಂತರ ಕಾಣೆಯಾದ ಬಗ್ಗೆ ಪಾಲಕರಾದ ಪರಸಪ್ಪ ಬ್ಯಾಗಿ ಅವರು ಜೂನ್ 9ರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬಕ್ಕೆ ಚಾಲನೆ
ಪಿಎಸ್ಐ ಪುಂಡಲಿಕ ಪಟೇದಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
