ಜೈನ ಸಮುದಾಯದ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮತ್ತು ಸಹಾಯಕ ಅರ್ಚಕರುಗಳಿಗೆ ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವಧನ ನೀಡಲು ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿಗಳು ದಕ್ಷಿಣ ಕನ್ನಡ ಜಿಲ್ಲೆಯ ಜೈನ್ ಬಸದಿಗಳು ಕರ್ನಾಟಕ ರಾಜ್ಯದಲ್ಲಿನ ಸಂಘಗಳ ನೋಂದಣಿ ಕಾಯ್ದೆಯನ್ವಯ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು. ಪ್ರಧಾನ ಗ್ರಂಥಿ/ಅರ್ಚಕರಿಗೆ ರೂ.6000 ಮತ್ತು ಸಹಾಯಕ ಗ್ರಂಥಿ/ಅರ್ಚಕರಿಗೆ ರೂ.5000 ಮಾಸಿಕ ಗೌರವಧನ ನೀಡಲಾಗುತ್ತದೆ.
ಸಲ್ಲಿಸಬೇಕಾದ ದಾಖಲೆಗಳು:
ಅರ್ಜಿಯೊಂದಿಗೆ ಅರ್ಚಕರು/ಗ್ರಂಥಿಗಳ ಭಾವಚಿತ್ರ, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಪ್ರತಿ, ಅರ್ಚಕರು/ಗ್ರಂಥಿಗಳು ಅವರ ಹುದ್ದೆಗೆ ಸಂಬಂಧಪಟ್ಟ ಧಾರ್ಮಿಕ ವಿದ್ಯಾರ್ಹತೆಯ ಕುರಿತು ದಾಖಲೆ, ಕಳೆದ ಮೂರು ವರ್ಷಗಳಲ್ಲಿ ವಾಸವಿರುವ ಬಗ್ಗೆ ಸ್ಥಳೀಯ ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ, ಸಂಸ್ಥೆಯವರು ಅರ್ಚಕರುಗಳ ಮಾಹೆವಾರು ಕರ್ತವ್ಯದ ಹಾಜರಾತಿ ಬಗ್ಗೆ ಹಾಗೂ ಸೇವಾ ಪ್ರಮಾಣ ಪತ್ರ ದೃಢೀಕರಣ ಪತ್ರವನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು.
ಇದನ್ನು ಓದಿದ್ದೀರಾ? ಪರಿಸರ ಸ್ನೇಹಿ ಹೆಜ್ಜೆ: ‘ಬಯೋಡಿಗ್ರೇಡೆಬಲ್’ ಪ್ಲಾಸ್ಟಿಕ್ ಪೊಟ್ಟಣದಲ್ಲಿ ನಂದಿನಿ ಹಾಲಿನ ಪೂರೈಕೆ ಆರಂಭಿಸಿದ ಬಮೂಲ್
ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 26. ಹೆಚ್ಚಿನ ಮಾಹಿತಿಗೆ ಅರ್ಜಿ ನಮೂನೆ ಮತ್ತು ಇತರೆ ಮಾಹಿತಿಗೆ ನಗರದ ಪಾಂಡೇಶ್ವರದ ಮೌಲಾನಾ ಅಝಾದ್ ಭವನದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.