ಕಪ್ಪು ಬಣ್ಣದ ಶರ್ಟ್ ಮೇಲೆ ಮೂರು ಕುದುರೆಗಳ ಚಿತ್ರ ಮತ್ತು ಅಶ್ವವನ್ನೇರಿದವರ ಕೈಯಲ್ಲಿ ಬಿಲ್ಲುಬಾಣ, ಕತ್ತಿ- ಈ ರೀತಿಯ ಗುರುತು ಹೊತ್ತ ಸಮವಸ್ತ್ರದಲ್ಲಿ ಮಣಿಪುರದ ಇಂಫಾಲ ಕಣಿವೆ ಭಾಗದಲ್ಲಿ ತಿರುಗುವ ಯಾವುದೇ ಹುಡುಗರನ್ನು ನೋಡಿದರೂ ಇವರು ‘ಆರಂಬೈ ತೆಂಗೋಲ್’ ಸಂಘಟನೆಯವರೆಂದು ಸುಲಭವಾಗಿ ಹೇಳಿಬಿಡಬಹುದು. ಇವರನ್ನು ‘ಕಪ್ಪು ಶರ್ಟ್ ತೊಟ್ಟ ಹುಡುಗರು’ ಎಂದೂ ಕರೆಯಲಾಗುತ್ತದೆ. ಮಣಿಪುರ ಹಿಂಸಾಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಈ ಗುಂಪು ಮತ್ತೆ ಸುದ್ದಿಯಲ್ಲಿದೆ. ತಮ್ಮ ನಾಯಕನನ್ನು ಬಂಧಿಸಿದ ಕೂಡಲೇ ಬೀದಿಗಿಳಿದು, ಆಕ್ರೋಶವನ್ನೂ ಹೊರಹಾಕಿದೆ. ಆರಂಬೈ…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.