ಹರಿಹರ ನಗರವು ಸಂಪೂರ್ಣ ಹಾಳಾಗಿ ಹೋಗಿದೆ. ನಗರದ ತುಂಬೆಲ್ಲ ಧೂಳು, ರಸ್ತೆಗಳಲ್ಲಿ ಗುಂಡಿಗಳು, ಅರ್ಧರ್ದ ತೆರೆದ ಚರಂಡಿಗಳು, ಕತ್ತಲೆ ಆವರಿಸಿದ ನಗರದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಇದರಿಂದ ಸ್ಥಳೀಯರು ಪರದಾಡುತ್ತಿದ್ದಾರೆ ಎಂದು ದಾವಣಗೆರೆ ನಗರಸಭೆ ಅಧ್ಯಕ್ಷ ಸುರೇಶ್ ಚಂದಾಪುರ ಹೇಳಿದರು.
ದಾವಣಗೆರೆ ನಗರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಜಿಲ್ಲಾಧಿಕಾರಿ ಭೇಟಿ ಮಾಡಿ ಹರಿಹರ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಚರ್ಚೆ ನಡೆಸಿ ಮಾತನಾಡಿದರು.
ಹರಿಹರ ನಗರದ ಅಭಿವೃದ್ಧಿಗೆ ಕೂಡಲೇ ಸರ್ಕಾರದ ಅನುದಾನಗಳನ್ನು ಬಿಡುಗಡೆ ಮಾಡಬೇಕು. ಅಭಿವೃದ್ಧಿ ಕಾರ್ಯಗಳಿಂದ ಸ್ಥಳೀಯ ನಿವಾಸಿಗಳು ಮುಕ್ತವಾಗಿ ನೆಮ್ಮದಿಯಿಂದ ಬದುಕುವಂತಾಗಬೇಕು” ಎಂದು ಮನವಿ ಮಾಡಿದರು.
ನೂತನ ಉಪಾಧ್ಯಕ್ಷ ಕೆಜಿ ಸಿದ್ದೇಶ್ ಮಾತನಾಡಿ, “ಮುಂಜಾನೆ ಎದ್ದ ಕೂಡಲೇ ನಮ್ಮ ವಾರ್ಡಿಗೆ ಭೇಟಿ ಕೊಟ್ಟರೆ ಜನ ನಿತ್ಯವೂ ತಮ್ಮ ಸಂಕಷ್ಟಗಳನ್ನು ನಮ್ಮೆದುರು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ನಿತ್ಯ ಪ್ರಯತ್ನ ಪಡುತ್ತಿದ್ದೇವೆ” ಎಂದು ಹೇಳಿದರು.
“ನಾವು ನಮ್ಮ ವಾರ್ಡ್ ಮತ್ತು ನಗರವನ್ನು ಸುಂದರ ಹಾಗೂ ಉತ್ತಮ ಪರಿಸರವನ್ನಾಗಿ ನಿರ್ಮಾಣ ಮಾಡಬೇಕು. ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಸೌಲಭ್ಯ ಒದಗಿಸಬೇಕು. ಪ್ರತಿಯೊಂದು ವಾರ್ಡ್‌ಗಳಲ್ಲಿ ವಿದ್ಯುತ್ ದೀಪ, ಕುಡಿಯುವ ಶುದ್ಧ ನೀರು ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಜನರಿಗೆ ತಲುಪಿಸಬೇಕೆಂಬ ಕನಸು ಇಟ್ಟುಕೊಂಡು ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದೇವೆ” ಎಂದು ಅಬಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅನಾಥ ಶಿಶು ಪತ್ತೆ; ವಾರಸುದಾರರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನವಿ
“ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ತಾವು ಹರಿಹರ ನಗರಕ್ಕೆ ಭೇಟಿ ನೀಡಿ, ಅಲ್ಲಿನ ವಾತಾವರಣವನ್ನು ಪರಿಶೀಲಿಸಿ ಶೀಘ್ರದಲ್ಲೇ ಹರಿಹರ ನಗರವನ್ನು ಸುಂದರನ್ನಾಗಿ ಮಾಡುವುದಕ್ಕೆ ಸರ್ಕಾರದ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ನಗರಸಭಾ ಸದಸ್ಯ ಪಿ ಎನ್ ವಿರೂಪಾಕ್ಷಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಸುರೇಶ್ ಚಂದಾಪುರ್ ಮತ್ತಿತರರು ಇದ್ದರು.