ಚಿತ್ರದುರ್ಗ | ಉಪವಿಭಾಗಾಧಿಕಾರಿಗಳ ಭರವಸೆ ಹಿನ್ನೆಲೆ ಅನಾಥ ಸೇವಾಶ್ರಮ ಅವ್ಯವಹಾರ ಪ್ರತಿಭಟನೆ ತಾತ್ಕಾಲಿಕ ಮುಂದೂಡಿಕೆ

Date:

Advertisements

ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅವ್ಯವಹಾರ ತನಿಖೆ ಮತ್ತು ಆಡಳಿತಾಧಿಕಾರಿ ನಿಯೋಜನೆಗೆ ಒತ್ತಾಯಿಸಿ ಅನಾಥ ಸೇವಾಶ್ರಮ ರಕ್ಷಣಾ ಸಮಿತಿ ನೆಡೆಸುತ್ತಿರುವ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದ್ದು, ಎಂಟನೇ ದಿನದ ಪ್ರತಿಭಟನೆ ನೆಡೆಯುವ ಸ್ಥಳಕ್ಕೆ ಚಿತ್ರದುರ್ಗ ಉಪವಿಭಾಗಾಧಿಕಾರಿ, ಜಿಲ್ಲಾ ರಿಜಿಸ್ಟ್ರಾರ್, ತಹಶೀಲ್ದಾರವರು ಭೇಟಿ ನೀಡಿ ಪರಿಶೀಲನೆ ನೆಡೆಸಿ ಪರಿಹರಿಸುವ ಭರವಸೆ ನೀಡಿದ್ದಾರೆ.

1002139356 1
ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಸಂಸ್ಥಾಪಕರು “ತಿರುಕ” ಎಂದೇ ಹೆಸರಾಗಿದ್ದ ರಾಘವೇಂದ್ರ ಗುರೂಜಿ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಆಶ್ರಮದ ಬಳಿ ನಡೆಯುತ್ತಿದ್ದ ಎಂಟನೇ ದಿನದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಉಪವಿಭಾಗಾಧಿಕಾರಿಗಳು ಮತ್ತು ಅಧಿಕಾರಿಗಳು ಅನಾಥ ಸೇವಾಶ್ರಮ ರಕ್ಷಣಾ ಸಮಿತಿಯ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಬೇಡಿಕೆಗಳನ್ನು ಅತಿ ಬೇಗ ಬಗೆಹರಿಸಿಕೊಡುತ್ತೇವೆ, ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

1002139341
ಮಲ್ಲಾಡಿಹಳ್ಳಿ ಸೇವಾಶ್ರದ ವಿವಿಧ ವಿದ್ಯಾಸಂಸ್ಥೆ, ಆಡಳಿತ ಕಟ್ಟಡಗಳು

ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಮುಖಂಡ ಸಂತೋಷ್ “ತಿರುಕ ಎಂದೇ ಹೆಸರಾಗಿದ್ದ ರಾಘವೇಂದ್ರ ಗುರೂಜಿ ಕಟ್ಟಿದ ಮಲ್ಲಾಡಿಹಳ್ಳಿ ಆಶ್ರಮದ ಉಳಿವಿಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಉಪವಿಭಾಗಾಧಿಕಾರಿ, ಜಿಲ್ಲಾ ರಿಜಿಸ್ಟ್ರಾರ್, ತಹಶೀಲ್ದಾರರವರು ಭೇಟಿ ನೀಡಿ ಆಡಳಿತಾಧಿಕಾರಿ ನೇಮಕ ಮತ್ತು ಅವ್ಯವಹಾರ ತನಿಖೆಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಭರವಸೆಗೆ ಗೌರವಿಸುವ ಸಲುವಾಗಿ ಕಾಲಾವಕಾಶ ನೀಡಿ ವಿರಾಮ ಹಾಕಲಾಗಿದೆ. ಭರವಸೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಹೋರಾಟಕ್ಕೆ ಸಹಕಾರ ಕೊಟ್ಟ ಹೋರಾಟದ ಎಲ್ಲಾ ಸಮಿತಿಯವರಿಗೆ, ಗ್ರಾಮಸ್ಥರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ, ಆಶ್ರಮದ ಭಕ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ” ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪತ್ರಕರ್ತರ ಮೇಲೆ ಹಲ್ಲೆ ವಿರುದ್ಧ ಕ್ರಮಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಭಟನೆ

ಈ ವೇಳೆ ಓಂಕಾರ ಮೂರ್ತಿ ವಕೀಲರು, ಉಮೇಶ್, ಶರತ್ ಕುಮಾರ್, ಚೇತನ್, ದುಮ್ಮಿ ಚಿಕ್ಕಪ್ಪ ಸಿದ್ದಪ್ಪ, ಪತ್ರಕರ್ತ ಚಿತ್ತಪ್ಪ, ಮನ್ಸೂರ್ ಪಾಷಾ, ಶಿವಪುರ ಹಾಲೇಶ್‌, ಚನ್ನಪ್ಪನಹಟ್ಟಿ ಜಯ್ಯಪ್ಪ ಗೌಡ, ವಿನೋದ್, ಆಂಜಿನಪುರ ಜಗನ್ನಾಥ, ಕೆಂಗುಂಟೆ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ರಾಮಘಟ್ಟ ನಾಗರಾಜ್, ಕೆಂಗುಂಟೆ ಘಟ್ಟಿ ಓಂಕಾರಪ್ಪ, ಮಲ್ಲಾಡಿಹಳ್ಳಿ ವೆಂಕಟೇಶ್, ಗೋಪಾಲಪ್ಪ ಶಿಕ್ಷಕರು, ಮುಸ್ಲಿಂ ಮುಖಂಡ ಇಮ್ರಾನ್ ಸಾಬ್, ಗ್ರಾಮ ಪಂಚಾಯಿತಿ ಸದಸ್ಯ ಬಾಬೂಜಿ ಸೇರಿದಂತೆ ನೂರಾರು ಮುಖಂಡರು, ಆಶ್ರಮದ ಭಕ್ತರು, ಅನಾಥ ಸೇವಾಶ್ರಮ ರಕ್ಷಣಾ ಸಮಿತಿಯ ಸದಸ್ಯರು ಹಾಜರಿದ್ದರು.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X