ಯಾದಗಿರಿ | ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ವಜಾಕ್ಕೆ ಕದಸಂಸ ಆಗ್ರಹ

Date:

Advertisements

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಅವರು ಕೀಳು ಭಾಷೆ ಬಳಸಿ ಅವಹೇಳ ಮಾಡಿರುವುದನ್ನು ಖಂಡಿಸಿ ಈಚೆಗೆ ಯಾದಗಿರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ಯಾದಗಿರಿ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಪ್ರತಿಭಟನಾ ಮರೆವಣಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿತು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಕದಸಂಸ ಜಿಲ್ಲಾಧ್ಯಕ್ಷ ಶಿವಪುತ್ರ ಜವಳಿ ಮಾತನಾಡಿ, ʼಪ್ರಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜೀವಪರ, ಜನಪರ ಹಾಗೂ ಅಂಬೇಡ್ಕರ್‌ ಸಿದ್ಧಾಂತ ಮೈಗೂಡಿಸಿಕೊಂಡು ಬಿಜೆಪಿ ಹಾಗೂ ಕೋಮುವಾದಿ ಸಂಘಪರಿವಾರದವರನ್ನು ವಿಧಾನಸೌಧದ ಒಳಗೆ ಹಾಗೂ ಹೊರಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕವಾಗಿ ಕೇಳಿರುವ ಸಂವಿಧಾನ ಬದ್ಧವಾದ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕ ಸಾಮರ್ಥ್ಯವಿಲ್ಲದ ಮನುವಾದಿಗಳು ಖರ್ಗೆ ಅವರ ವೈಯಕ್ತಿಕ ನಿಂದನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

ನಾಡಿನ ಅಭಿವೃದ್ಧಿ ಹಾಗೂ ದಲಿತರ ಮೇಲಿನ ದೌರ್ಜನ್ಯಗಳ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚಿಸಲು ಪಾಲ್ಗೊಳ್ಳದ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ, ಆರ್‌ಎಸ್‌ಎಸ್ ಅಣತಿಗೆ ತಕ್ಕಂತೆ ʼಮನುವಾದಿʼಗಳಾಗಿ ವರ್ತಿಸುತ್ತಿದ್ದಾರೆ. ಯಾವ ಘನ ಉದ್ದೇಶ ಇಲ್ಲದಿದ್ದರೂ, ಸಣ್ಣಪುಟ್ಟ ನೆಪದಿಂದ ಪದೇ ಪದೇ ಕಲಬುರಗಿಗೆ ಆಗಮಿಸುವ ನಾರಾಯಣಸ್ವಾಮಿಅ ಅವರು ಖರ್ಗೆ ಅವರನ್ನು ನಿಂದಿಸುವುದನ್ನೇ ಕಾಯಕ ಮಾಡಿಕೊಂಡು, ಖರ್ಗೆ ಕುಟುಂಬದ ವಿರುದ್ಧ ಸುಳ್ಳು ಆಪಾದನೆ ಹೊರಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತ, ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ವಿಷ ಬಿತ್ತಿ ಸಾಮರಸ್ಯ ಹಾಳು ಮಾಡುತ್ತಿರುವುದು ಖಂಡನೀಯʼ ಎಂದರು.

ʼಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿ ಸಾರ್ವಜನಿಕವಾಗಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಲು ಸಮುದಾಯ ಚಿಂತಿಸುತ್ತಿದೆ. ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಈಚೆಗೆ ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಅಸಂವಿಧಾನಿಕ ಪದ ಬಳಸಿ ಅವಹೇಳನ ಮಾಡಿರುವುದು ಖಂಡನೀಯ. ಜವಾಬ್ದಾರಿ ಸ್ಥಾನದಲ್ಲಿರುವವರ ಇಂಥ ನಡುವಳಿಕೆ ಸರಿಯಲ್ಲ. ಕೂಡಲೇ ಇವರನ್ನು ಎಂಎಲ್ಸಿ ಸ್ಥಾನದಿಂದ ವಜಾಗೊಳಿಸಬೇಕುʼ ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಕಾರ ಹುಣ್ಣಿಮೆ‌ ಸಂಭ್ರಮ : ಎತ್ತಿನ ಮೈಮೇಲೆ ʼಜೈ ಆರ್‌ಸಿಬಿʼ ಬಣ್ಣ ಬರೆದು ಅಭಿಮಾನ ತೋರಿದ ರೈತ

ಪ್ರಮುಖರಾದ ಚಂದಪ್ಪ ಮುನಿಯಪ್ಪನೊರ, ಶಿವಲಿಂಗ ಹಸನಾಪೂರ, ಭೀಮಣ್ಣ ಹುಣಸಗಿ, ಮಲ್ಲಿಕಾರ್ಜುನ ಹುರಸಗುಂಡಗಿ, ಮಲ್ಲು ಬೇವಿನಹಳ್ಳಿ, ವಾಸು ಕೋಗಿಲಕರ್ ರಮೇಶ ಬಾಚಿಮಟ್ಟಿ, ಮರೆಪ್ಪ ಕ್ರಾಂತಿ, ಪುರಷೋತ್ತಮ ಬಬಲಾದ, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ನಾಗರಾಜ ಕೊಡಮನಳ್ಳಿ, ಶ್ರೀಮಂತ ಸಿಂಗನಳ್ಳಿ, ಸುಭಾಷ ಹುರಸಗುಂಡಗಿ, ಸಿದ್ದಪ್ಪ ಕೊಡಮನಳ್ಳಿ, ತಾಯಪ್ಪ ಭಂಡಾರಿ, ರಂಗಸ್ವಾಮಿ ಕೊಂಕಲ್, ತಿಪ್ಪಣ್ಣ ಶೆಳ್ಳಗಿ, ಶೇಖರ ಮಂಗಳೂರು, ರಾಜು ಬಡಿಗೇರ, ವೆಂಕಟೇಶ ದೇವಾಪೂರ, ಚನ್ನಪ್ಪ ದೇವಾಪೂರ, ಭೀಮರಾಯ ಮಂಗಳೂರು, ಖಾಜಾ ಅಜಮೀರ, ಎಂ.ಪಟೇಲ್, ಚಂದ್ರ ಬಲಶೆಟ್ಟಿಹಾಳ, ಪರಮಣ್ಣ ಚಲವಾದಿ, ಚೌಡಪ್ಪ ಯಡಹಳ್ಳಿ, ಸಾಯಬಣ್ಣ ಸದಬು, ಯಲ್ಲಪ್ಪ ಗುಂಡ್ಲಗೇರಾ, ದೊಡ್ಡಪ್ಪ ಕಾಡಂಗೇರಾ, ಮಲ್ಲಪ್ಪ ಕೋಳಿ ಖಾನಾಪೂರ, ಚನ್ನಬಸ್ಸು ಗುರಸಣಗಿ, ಬನ್ನಪ್ಪ ಕುರಕುಂದಿ, ಹೊನ್ನಯ್ಯ ಪೂಜಾರಿ, ಶರಣಪ್ಪ ಮಳಳ್ಳಿ, ಮಲ್ಲಪ್ಪ ಅನವಾರ, ಪರಶುರಾಮ ಅಳಿಗೇರಿ, ಸಾಯಬಣ್ಣ ಬಳ್ಳಕ್ಕಿ, ಸಂದೀಪ ಹುರಸಗುಂಡಗಿ, ಬಸಲಿಂಗಪ್ಪ ಹಾಲಭಾವಿ, ನಾಗಪ್ಪ ರಸ್ತಾಪೂರ, ದೇವಪ್ಪ ಕೊಂಬಿನ್, ರವಿ ಹಳಿಸಗರ, ಭೀಮಾಶಂಕರ ಗುಂಡಳ್ಳಿ, ಜೈಭೀಮ ಸಿಂಗನಹಳ್ಳಿ, ನಾಗರಾಜ ಹುರಸಗುಂಡಗಿ, ಶರಣಪ್ಪ ಕೊಂಬಿನ್ ಕುರಕುಂದಾ, ದೇವ ಕುರಕುಂದಾ, ದೇವ ಅಜ್ಜನೂರ, ಸಾಬಣ್ಣ ವಗ್ಗಾ, ಚಂದ್ರ ಬುದ್ಧನಗರ, ಗೌತಮ, ಚಂದ್ರಶೇಖರ, ಮಲ್ಲಿಕಾರ್ಜುನ (ಮನಗನಾಳ), ಸಿದ್ದಪ್ಪ ಜಂಡದಕೇರಾ, ಪಾರಪ್ಪ ತಳವಾರ ದೇವತಕಲ್, ಮೌನೇಶ ದೇವತಕಲ್, ದೇವಿಂದ್ರಪ್ಪ ದೇವತಕಲ್, ಹಣಮಂತ ದೇವಾಪೂರ, ಹುಸನಪ್ಪ ಪೂಜಾರಿ ದೇವಾಪೂರ, ಹಸನ್‌ಸಾಬ ದೇವಾಪೂರ, ಯಲ್ಲಪ್ಪ ರಾಳ, ಹಣಮಂತ ರತ್ತಾಳ, ಪರಶರಾಮ ಸಿಂಗನಳ್ಳಿ, ಭೀಮರಾಯ ಕೊಡಮನಳ್ಳಿ, ಯಲ್ಲಪ್ಪ, ಸಿದ್ದಪ್ಪ ಪೂಜಾರಿ (ಕಾಡಂಗೇರಾ) ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X