ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಮೊದಲು ಒಂದು ಡಿಕ್ಕಿ ಹೊಡೆದ ಪರಿಣಾಮ ಕಳಗೆ ಬಿದ್ದ ಬಾಲಕನ ಮೇಲೆ ಮತ್ತೊಂದು ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ, ಬುಧವಾರದಂದು ತನ್ನ ಅಕ್ಕಂದಿರರೊಂದಿಗೆ ನಾಗನೂರ ಪಟ್ಟಣದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಹೋಗಿದ್ದ ಮುತ್ತುರಾಜ ಮುಗಳಖೋಡ (5) ಮೃತ ಬಾಲಕ.
ಸಂಜೆ ಶಾಲೆಯ ಅನಧಿಕೃತ ವಾಹನವೊಂದರಲ್ಲಿ ಮನೆಯ ಪಕ್ಕದಲ್ಲಿರುವ ಹೆದ್ದಾರಿಯ ಮೇಲೆ ವಾಹನ ನಿಲ್ಲಿಸಿ, ವಿದ್ಯಾರ್ಥಿಗಳನ್ನು ಕೆಳಗಿಸಿ ವೇಳೆ ವಿದ್ಯಾರ್ಥಿಗಳ ಜೊತೆಗೆ ಬಾಲಕ ಕೂಡ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಕೆಳಗೆ ಮೇಲೆ ಬಿದ್ದ ವೇಳೆ ಮತ್ತೊಂದು ಅಪರಿಚಿತ ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ, ಕೂಡಲೇ ಶಾಲಾ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ