ಕೊಡಗು ಜಿಲ್ಲೆ, ಮಡಿಕೇರಿ ನಗರದಲ್ಲಿರುವ ಬೂಕರ್ ಪ್ರಶಸ್ತಿ ಪುರಸ್ಕ್ರತೆ ದೀಪಾ ಬಾಸ್ತಿಯವರ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಪ್ರತಿನಿಧಿಗಳು ಬೇಟಿ ನೀಟಿ ಸನ್ಮಾನಿಸಿದರು .
ಇದೇ ಸಂದರ್ಭದಲ್ಲಿ ದೀಪ ಬಾಸ್ತಿಯವರೊಂದಿಗೆ ಸಾಹಿತ್ಯದಿಂದ ಸಮಾಜದ ಬದಲಾವಣೆ ಕುರಿತಾಗಿ ಚರ್ಚಿಸಿದರು. ತಮ್ಮ ಬರಹದಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ಕೊಡಬೇಕಾಗಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ದೀಪಾ ಬಾಸ್ತಿಯವರು ‘ ಸಮಾಜದ ಬದಲಾವಣೆಗಳಲ್ಲಿ ಸಾಹಿತ್ಯ ರಂಗವು ಪ್ರಮುಖ ಪಾತ್ರ ವಹಿಸುತ್ತದೆ , ಈ ನಿಟ್ಟಿನಲ್ಲಿ ಪ್ರಯತ್ನ ಮುಂದು ವರಿಯಬೇಕಿದೆ ‘ ಎಂದು ಅಭಿಮತ ವ್ಯೆಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ ‘ ಸೇರಿದ ಅಣ್ಣೂರು ಗ್ರಾಮ ಪಂಚಾಯಿತಿ
ಕೊಡಗು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮುಹೀನ ಅಬೂಬಕ್ಕರ್, ಮಡಿಕೇರಿ ಅಧ್ಯಕ್ಷೆ ವಹೀದಾ ಶೌಕತ್ , ಸದಸ್ಯರುಗಳಾದ ಬೀಬಿ ಫಾತಿಮಾ, ಮರ್ಯಮ್ ಮಫೀದ, ತಾಹೀರಾ, ಸಿ. ಹೆಚ್. ಅಪ್ಸರ್, ಮಡಿಕೇರಿ ಸ್ಥಾನೀಯ ಅಧ್ಯಕ ಜಿ. ಹೆಚ್. ಮೊಹಮ್ಮದ್ ಹನೀಫ್, ಸದಸ್ಯರುಗಳಾದ ಮೊಹಮ್ನದ್ ಮುಸ್ತಫಾ, ಅಬ್ದುಲ್ಲಾ ಸೇರಿದಂತೆ ಇನ್ನಿತರರು ಶುಭಾಶಯ ಕೋರಿದರು.