ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್-2ರಲ್ಲಿ ಸ್ಕಾಟ್‌ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ ನಡುವೆ ನಡೆದ ಪಂದ್ಯದಲ್ಲಿ ನೆದರ್‌ಲ್ಯಾಂಡ್ ಗೆದ್ದು ಬೀಗಿದೆ. ಮಾತ್ರವಲ್ಲದೆ, ಹೊಸ ಇತಿಹಾಸ ನಿರ್ಮಿಸಿದೆ. 369 ರನ್‌ಗಳನ್ನು ಬೆನ್ನಟ್ಟಿ ಗೆಲ್ಲುವ ಮೂಲಕ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಧಿಕ ರನ್‌ಗಳನ್ನು ಚೇಸ್ ಮಾಡಿ ಗೆದ್ದ 3ನೇ ತಂಡವೆಂದು ಖ್ಯಾತಿ ಪಡೆದಿದೆ. ಇತಿಹಾಸ ಸೃಷ್ಟಿಸಿದೆ.
ಪಂದ್ಯದಲ್ಲಿ ಸ್ಕಾಟ್‌ಲ್ಯಾಂಡ್ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟದೊಂದಿಗೆ 369 ರನ್‌ಗಳನ್ನು ಕಲೆ ಹಾಕಿತ್ತು. ನೆದರ್‌ಲ್ಯಾಂಡ್‌ಗೆ ಗೆಲುವಿಗೆ 370 ರನ್‌ಗಳ ಗುರಿ ನೀಡಿತ್ತು. ಬೃಹತ್ ಮೊತ್ತದ ಬೆನ್ನತ್ತಿನ ಬೆದರ್‌ಲ್ಯಾಂಡ್ ತಂಡವು ಇನ್ನೂ 4 ಬಾಲ್‌ಗಳು ಇರುವಂತೆಯೇ 374 ರನ್‌ಗಳನ್ನು ಗಳಿಸಿ, ಗೆಲವು ಸಾಧಿಸಿದೆ. ಅಧಿಕ ರನ್‌ಗಳನ್ನು ಚೇಸ್ ಮಾಡಿದ 3ನೇ ತಂಡವಾಗಿ ಪಟ್ಟಿಯಲ್ಲಿ ಹೊರಹೊಮ್ಮಿದೆ.
ಈ ಹಿಂದೆ, 2006ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 435 ರನ್‌ಗಳನ್ನು ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಆ ಮೂಲಕ, ಚೇಸಿಂಗ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರ ಸ್ಥಾನದಲ್ಲಿದೆ. ಮಾತ್ರವಲ್ಲ, 2ನೇ ಸ್ಥಾನದಲ್ಲಿಯೂ ದಕ್ಷಿಣ ಆಫ್ರಿಯಾ ತಂಡವೇ ಇದೆ. 2016ರಲ್ಲಿ ಇದೇ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 372 ರನ್‌ಗಳನ್ನು ಚೇಸ್ ಮಾಡುವ ಮೂಲಕ, ಮತ್ತೊಂದು ದಾಖಲೆ ಬರೆದುಕೊಂಡಿತ್ತು. ಇದೀಗ, 370 ರನ್‌ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿರುವ ನೆದರ್‌ಲ್ಯಾಂಡ್ ತಂಡವು 3ನೇ ಸ್ಥಾನಕ್ಕೇರಿದೆ.
ಪಂದ್ಯದಲ್ಲಿ, ನೆದರ್‌ಲ್ಯಾಂಡ್ ತಂಡದ ನಾಯಕ ಮ್ಯಾಕ್ಸ್ ಒ’ಡೌಡ್ ಉತ್ತಮ ಪ್ರದೇಶ ನೀಡಿದ್ದು, ಗೆಲುವಿನ ರೂವಾರಿ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. 130 ಬಾಲ್‌ಗಳನ್ನು ಎದುರಿಸಿದ ಮ್ಯಾಕ್ಸ್ 13 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳೊಂದಿಗೆ ಔಟಾಗದೇ 158 ರನ್‌ಗಳನ್ನು ಗಳಿಸಿದರು.
ಅಂತೆಯೇ, ಸ್ಕಾಟ್‌ಲ್ಯಾಂಡ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಾರ್ಜ್ ಮುನ್ಶೆ ಅವರು 191 ರನ್‌ಗಳಿಸಿದ್ದಾರೆ. 9 ರನ್‌ಗಳ ಅಂತರದಲ್ಲಿ ದ್ವಿಶತಕದಿಂದ ವಂಚಿತರಾಗಿದ್ದಾರೆ. ಅವರು ಪಂದ್ಯದಲ್ಲಿ 150 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 191 ರನ್ ಕಲೆಹಾಕಿದ್ದಾರೆ.