ಶಾಲೆಗಳಲ್ಲಿ(ಚುನಾವಣೆ ಮತಗಟ್ಟೆ) ಕೇಂದ್ರಗಳ ಮುಂಭಾಗದಲ್ಲಿ ನಿರ್ಮಿಸಲಾಗಿರುವ ryampaಗಳು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಕೂಡಲೇ ಇವುಗಳನ್ನು ದುರಸ್ತಿ ಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಘಟಕದಿಂದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಮತ್ತು ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ ಜಗತಾಫ್ ಅವರಿಗೆ ಮನವೆ ಸಲ್ಲಿಸಿದರು.
ಮನವಿ ಸಲ್ಲಿಸಿ ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠ ಮತ್ತು ಉಪಾಧ್ಯಕ್ಷ ಯೂಸೂಫ್ ಸೈಕಲ್‌ಗಾರ ಮಾತನಾಡಿ, “ರಟ್ಟಿಹಳ್ಳಿ ಪಟ್ಟಣದಲ್ಲಿ ಸರಿ ಸುಮಾರು 10-12 ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯಲ್ಲಿರುವ ಚುನಾವಣಾ ಮತಗಟ್ಟೆ ಹೆಸರಿನಲ್ಲಿ ನಿರ್ಮಿಸಲಾಗಿರುವ ರಾಂಪ್‌ಗಳು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರಿಂದ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೆ, ಶಿಕ್ಷಕರುಗಳಿಗೆ ವಿಶೇಷವಾಗಿ ಗರ್ಭೀಣಿಯರು, ಬಾಣಂತಿಯರು ಕಾಲು ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.
“ಚುನಾವಣಾ ಮತಗಟ್ಟೆಗೆಂದು ಶಾಲೆಯಲ್ಲಿ ನಿರ್ಮಿಸಿರುವ ರ‌್ಯಾಂಪ್‌ಗಳು ವೃದ್ಧರಿಗೆ ವಿಶೇಷ ಚೇತನರಿಗೆ ಅನುಕೂಲವಾಗುವ ಬದಲು ಸಮಸ್ಯೆಯಾಗುವಂತೆ ಕಂಡು ಬರುತ್ತಿವೆ. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ತೊಂದರೆಯಾಗುವಂತಿರುವ ರ‌್ಯಾಂಪ್‌ಗಳನ್ನು ತೆರವುಗೊಳಿಸಿ ಪುನಃ ಅನುಕೂಲವಾಗುವಂತೆ ರ‌್ಯಾಂಪ್‌ಗಳನ್ನು ನಿರ್ಮಿಸಬೇಕು. ಇಲ್ಲದೇ ಇದ್ದರೆ ಕರವೇ ಯಿಂದ ಕ್ಯಾಂಪ್‌ಗಳನ್ನು ತೆರವುಗೊಳಿಸುವುದಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಡಿ.ವಾಯ್.ಎಫ್.ಐ ಮನವಿ
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣ ಮಹಿಳಾ ಅಧ್ಯಕ್ಷರು ಗೀತಾಬಾಯಿ ಲಮಾಣಿ, ಮುಖಂಡರು ರಾಮಚಂದ್ರಪ್ಪ ಹಿಂಡಸಗಟ್ಟಿ, ಖಲಂದರ ಎತ್ತಿನಹಳ್ಳಿ,, ಪ್ರಕಾಶ ಡಂಬರ್, ರಾಜೇಸಾಬ ಮಾನೇಗಾರ, ಈರಪ್ಪ ಅಂಗಡಿ, ಶೇಖಪ್ಪ ಕಟ್ಟೇಕಾರ, ಆಶೀಫ್ ಬಣಕಾರ, ಶಫಿ ಹಾವೇರಿ, ಅಲತಾಫ್ ಜಂಬೂರ, ಇರ್ಪಾನ್ ಪುರದಕೇರಿ, ತೌಶೀಫ್ ಸೈಕಲ್‌ಗಾರ, ನೂರ್ ಮಕಂದಾರ, ಜ್ಯೋತಿ ಅಂಸಾಲಿ, ಅನೀಲ್ ಬಾವರ್‌ಕರ್, ಯಾಸೀನ್ ರಟ್ಟಿಹಳ್ಳಿ, ಹೆಡಿಯಾಲ ಸೇರಿದಂತೆ ಮತ್ತಿತರಿದ್ದರು.