ದುರಂತಗಳು ಸೃಷ್ಟಿಕರ್ತನ ವಿಧಿಯಾಗಿದೆ ಸ್ವೀಕರಿಸಲು ಕಷ್ಟವಾದರೂ ಸ್ವೀಕರಿಸುವುದು ಅನಿವಾರ್ಯವಾಗಿದೆ ಯಾವುದೇ ರೀತಿಯ ಪರಿಹಾರ ಅಥವಾ ಸಂತಾಪ ಮರಣ ಹೊಂದಿದವರನ್ನು ಬದುಕಿಸಲು ಸಾಧ್ಯವಿಲ್ಲ ಆದರೆ ಮಾನವ ಸಮಾಜದಲ್ಲಿ ಹುಟ್ಟಿದಂತಹ ನಾವು ಯಾರೇ ದುರಂತದಲ್ಲಿ ಮರಣ ಪಟ್ಟರೆ ಅದಕ್ಕಾಗಿ ವಿಷಾದಿಸುವುದು ಹಾಗೂ ಮೃತಪಟ್ಟವರಿಗೆ ಸಂತಾಪ ಸೂಚಿಸುವುದು ಹಾಗೂ ಮೃತಪಟ್ಟ ಕುಟುಂಬಗಳಿಗೆ ಸಾಂತ್ವಾನ ಹೇಳುವುದು ಮನುಷ್ಯ ಧರ್ಮವಾಗಿದೆ. ವಿಧಿಯ ಆಟಕ್ಕೆ ಬಲಿಯಾಗಿ ನಿನ್ನೆ ದಿನ ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಎಲ್ಲರ ಬಗ್ಗೆ ಕನಿಕರವಿದ್ದು ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ವಿಷಾದ ವ್ಯಕ್ತಪಡಿಸಿದೆ.
ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಇಂತಹ ದುರಂತಗಳು ಸಂಭವಿಸುವುದಕ್ಕಿಂತ ಮುಂಚೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಇನ್ನು ಮುಂದೆ ಇಂತಹ ದುರಂತಗಳು ಸಂಭವಿಸದಂತೆ ನೋಡಿಕೊಳ್ಳಬೇಕಾಗಿರುವುದು ಸಂಬಂಧಪಟ್ಟವರ ಆದ್ಯ ಕರ್ತವ್ಯವಾಗಿದೆ ಹಾಗೂ ಮೃತರಾದ ಕುಟುಂಬಗಳಿಗೆ ಈ ಸಂಕಷ್ಟದ ಸಮಯದಲ್ಲಿ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಆಶಿಸುತ್ತಾ ಇಡೀ ದೇಶ ಮೃತಪಟ್ಟವರ ಕುಟುಂಬದೊಂದಿಗೆ ನಿಲ್ಲಬೇಕೆಂದು ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ದೇಶದ ಜನರಲ್ಲಿ ಕೇಳಿಕೊಳ್ಳುತ್ತಾ ಇದೆ ಹಾಗೂ ಮೃತಪಟ್ಟ ಕುಟುಂಬದವರಿಗೆ ಗರಿಷ್ಠ ಪರಿಹಾರ ಹಾಗೂ ಸರಕಾರದಿಂದ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು ಎಂದು ಸರಕಾರಕ್ಕೆ ಆಗ್ರಹಿಸುತ್ತದೆ.