ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಗ್ರಾ.ಪಂ ಎಲ್ಲಾ ಗ್ರಾಮಗಳಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಪಡಿಸುವುದೇ ನಮ್ಮ ಗುರಿ ಎಂದು ನೂತನ ಅಧ್ಯಕ್ಷೆ ರಾಮಲಕ್ಷ್ಮಮ್ಮ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾ.ಪಂ ಅಧ್ಯಕ್ಷೆಯಾಗಿ ಗುರುವಾರ ಅವಿರೋಧ ಆಯ್ಕೆಯಾಗಿ ಮಾತನಾಡಿದರು.
ಈ ಹಿಂದೆ ತಿಪ್ಪೇಶ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. 19 ಮಂದಿ ಸದಸ್ಯರಲ್ಲಿ ೪ಮಂದಿ ಸದಸ್ಯರು ಗೈರಾಗಿದ್ದು, 15 ಸದಸ್ಯರು ಮಾತ್ರ ಚುನಾವಣೆ ವೇಳೆ ಹಾಜರಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಮಲಕ್ಷಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಸದಸ್ಯರ ಒಮ್ಮತದಂತೆ ಅವಿರೋಧ ಆಯ್ಕೆಯ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಅಪೂರ್ವ ಅಧಿಕೃತ ಘೋಷಣೆ ಮಾಡಿದರು.
ನೂತನ ಗ್ರಾ.ಪಂ ಅಧ್ಯಕ್ಷೆ ರಾಮಲಕ್ಷಮ್ಮ ಮಾತನಾಡಿ, ಗೃಹ ಸಚಿವರಾದ ಡಾ.ಜಿ ಪರಮೇಶ್ವರ್‌ರವರ ಆಶೀರ್ವಾದದಿಂದ ಮತ್ತು ಸದಸ್ಯರ ಬೆಂಬಲದಿಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಗ್ರಾ.ಪಂ ಎಲ್ಲಾ ಗ್ರಾಮಗಳಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿ ಪಡಿಸುವ ಉದ್ಧೇಶ ಹೊಂದಿದ್ದೇನೆ. ಆಯ್ಕೆ ಮಾಡಿದ ಸದಸ್ಯರಿಗೆ ಕೃತಜ್ಞತೆ ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ವೆಂಕಟೇಶ್‌ಬಾಬು ಮಾತನಾಡಿ, ಬಸವನಹಳ್ಳಿ ಗ್ರಾಮಕ್ಕೆ ಈ ದಿನ ವಿಶೇಷವಾದ ದಿನ, 30 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮದಿಂದ ಅಧ್ಯಕ್ಷರಾಗಿರುವುದು, ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಆಶೀರ್ವಾದದಿಂದ ಸದಸ್ಯರು ಬೆಂಬಲ ಸೂಚಿಸಿ ನಮ್ಮ ತಾಯಿ ರಾಮಲಕ್ಷಮ್ಮ ರವರನ್ನು ಆಯ್ಕೆ ಮಾಡಿದ್ದು, ಸದಸ್ಯರ ಬೆಂಬಲಕ್ಕೆ ನಮ್ಮ ಕುಟುಂಬ ಚಿರಖುಣಿಯಾಗಿದೆ ಎಂದು ಹೇಳಿ ತಾಯಿಗೆ ಅಭಿನಂದನೆ ಸಲ್ಲಿಸಿದರು.
ಗ್ರಾ.ಪಂ ಪಿಡಿಓ ಉಮೇಶ್ ಮಾತನಾಡಿ, ಚುನಾವಣಾಧಿಕಾರಿ ಅಪೂರ್ವ ಅನಂತರಾಮುರವರ ನೇತೃತ್ವದಲ್ಲಿ ಸದಸ್ಯರ ಒಮ್ಮತದಂತೆ ರಾಮಲಕ್ಷಮ್ಮರವರು ಅಧ್ಯಕ್ಷೆಯಾಗಿ ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಈ ವೇಳೆ ಗ್ರಾ.ಪಂ ಸದಸ್ಯರಾದ ಸಮೀಉಲ್ಲಾ, ಲಕ್ಷ್ಮೀಪತಿ, ತಿಪ್ಪೇಶ್, ಗೋವಿಂದರಾಜು, ಮಂಜುನಾಥ್ ಆರ್‌ಸಿ, ಕಾಂಚನ, ವೆಂಕಟಾಚಲಯ್ಯ, ಮೀನಾಕ್ಷಿ, ಅರಸಮ್ಮ, ಶೋಭಾ, ಕರಿಯಪ್ಪ, ಕೆಂಪಲಕ್ಷಮ್ಮ, ಬಸಮ್ಮ, ನಾಗರಾಜು, ಗ್ರಾ.ಪಂ ಪಿಡಿಓ ಉಮೇಶ್, ತಾ.ಪಂ ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಮಾಜಿ ಗ್ರಾ.ಪಂ ಅಧ್ಯಕ್ಷ ನಾಗರಾಜು, ವೆಂಕಟೇಶ್, ತಾ.ಪಂ ಮಾಜಿ ಸದಸ್ಯ ರಾಜಣ್ಣ, ಮುಖಂಡರಾದ ನವೀನ್, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.