ಕಿರಾಣಿ ಅಂಗಡಿಗೆ ನುಗ್ಗಿ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಯಾರ್ಡ್ ಪೊಲೀಸರು ಬಂಧಿಸಿ, 30 ಸಾವಿರ ರೂ.ನಗದು ಹಣವನ್ನು ವಶಪಡಿಸಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ಬಂಧಿತರನ್ನು ಸಿಯಾತಲಾಬ್ ಬಡಾವಣೆಯ ನಿವಾಸಿ ಎಂ.ಡಿ ಸೋಹೆಲ್ (22) ಹಾಗೂ ಜಲಾಲ್‌ನಗರ ನಿವಾಸಿ ಸದ್ದಾಮ್(21) ಎಂದು ಹೇಳಲಾಗಿದೆ.
ಇಬ್ಬರು ಜೂನ್ 8ರ ಮಧ್ಯರಾತ್ರಿ ಬಸವನಭಾವಿ ವೃತ್ತದಲ್ಲಿ ನಿಖಿಲ್ ಎಂಬುವವರ ಕಿರಾಣಿ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಇದರ ಬಗ್ಗೆ ಜೂ.11ರಂದು ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಕಳ್ಳರನ್ನು ಸೆರೆಹಿಡಿದು. ವಿಚಾರಣೆ ನಡೆಸಿದಾಗ ಖದೀಮರು 1.35 ಲಕ್ಷ ನಗದು ಹಣ ಹಾಗೂ ಒಂದು ಸಿಸಿಟಿವಿ ಡಿವಿಆರ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಅವರಿಂದ 30 ಸಾವಿರ ನಗದು ಹಣ ಜಪ್ತಿ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ; ವಕೀಲರ ಪ್ರತಿಭಟನೆ
ಕಳ್ಳತನ ಮಾಡಿದ ಡಿವಿಆರ್ ಅನ್ನು ಬಸವನಭಾವಿ ವೃತ್ತದ ಬಳಿ ಇರುವ ರಾಜಕಾಲುವೆಯಲ್ಲಿ ಹಾಕಲಾಗಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪಂಚನಾಮೆ ಮಾಡಿದರು. ನಂತರ ಇಬ್ಬರು ಆರೋಪಿಗಳನ್ನು ಕಾರಾಗೃಹಕ್ಕೆ ಒಪ್ಪಿಸಲಾಗಿದೆ
