ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನಪತನ ದುರಂತದಲ್ಲಿ ಮೃತಪಟ್ಟ ಕೇರಳದ ನರ್ಸ್ ಕುರಿತು ಅವಹೇಳನಕಾರಿ, ಅಮಾನವೀಯ ಪೋಸ್ಟ್ ಹಾಕಿದ್ದ ಕೇರಲದ ಸರ್ಕಾರಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕು ಕಚೇರಿಯಲ್ಲಿ ಜೂನಿಯರ್ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪವಿತ್ರನ್ ಅಮಾನತುಗೊಂಡ ಅಧಿಕಾರಿ. ಅವರು ಅಪಘಾತದಲ್ಲಿ ಮೃತಪಟ್ಟ ಪಟ್ಟಣಂತಿಟ್ಟದ ನರ್ಸ್ ರಂಜಿತಾ ಅವರ ಕುರಿತು ಅಪಹಾಸ್ಯದ ಪೋಸ್ಟ್ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಮೃತ ರಂಜಿತಾ ಅವರು ಯುಕೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಕೇರಳ ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ದೊರೆತಿತ್ತು. ಇಲ್ಲಿ ಕೆಲಸಕ್ಕೆ ಸೇರುವುದಕ್ಕೂ ಮುನ್ನ ಅಗತ್ಯವಿದ್ದ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕೇರಳಕ್ಕೆ ಬಂದಿದ್ದರು. ಪ್ರಕ್ರಿಯೆಗಳನ್ನು ಮುಗಿಸಿ, ಲಂಡನ್‌ಗೆ ಮರುಳುತ್ತಿದ್ದರು.
ಅಹಮದಾಬಾದ್‌ನಿಂದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ದುರದೃಷ್ಟವಶಾತ್, ವಿಮಾನ ಪತನಗೊಂಡು ಮೃತಪಟ್ಟಿದ್ದಾರೆ. ಅವರ ಬಗ್ಗೆ ಪವಿತ್ರನ್ ಅವರು ಅಮಾನವೀಯ ಪೋಸ್ಟ್ ಹಾಕಿದ್ದರು. ಪವಿತ್ರನ್ ಅವರ ಪೋಸ್ಟ್ ‘ಅವಮಾನಕರ’ ಎಂದು ಎಂದು ಕೇರಳ ಕಂದಾಯ ಸಚಿವ ಕೆ. ರಾಜನ್ ಹೇಳಿದ್ದಾರೆ. ತಮ್ಮ ಗಮನಕ್ಕೆ ಬಂದ ಕೂಡಲೇ ಅವರನ್ನು ಅಮಾನತು ಮಾಡಿ, ಅದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.