ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಎಟಿ) ನಡೆಸುವ ನೀಟ್ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು ರಾಜಸ್ಥಾನದ ಮಹೇಶ್ ಕುಮಾರ್ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ವಿಜಯಪುರದ ನಿಖಿಲ್ ಸೊನ್ನದ ರಾಜ್ಯಕ್ಕೆ ಪ್ರಥಮ ಪಡೆದಿದ್ದಾರೆ.
ಈ ವರ್ಷ ಒಟ್ಟು 22.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 12.36 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಪೈಕಿ ರಾಜಸ್ಥಾನದ ಮಹೇಶ್ ಕುಮಾರ್ ಮೊದಲ ರ‍್ಯಾಂಕ್ ಪಡೆದಿದ್ದು, ಮಧ್ಯಪ್ರದೇಶದ ಉತ್ಕರ್ಷ ಅವಾಧಿಯಾ ಎರಡನೇ ರ‍್ಯಾಂಕ್ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ನೀಟ್ ಯುಜಿ ಅಂತಿಮ ಉತ್ತರ ಬಿಡುಗಡೆ: ಹೇಗೆ ಪರಿಶೀಲಿಸುವುದು?
ರಾಜ್ಯದಲ್ಲಿ ಮಂಗಳೂರು ವಳಚಿಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿಜಯಪುರದ ನಿಖಿಲ್ ಸೊನ್ನದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನೀಟ್‌ನಲ್ಲಿ ರಾಷ್ಟ್ರಕ್ಕೆ 17ನೇ ರ‍್ಯಾಂಕ್ ಗಳಿಸಿದ್ದಾರೆ. ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ. ಸಿದ್ದಪ್ಪ ಸೊನ್ನದ ಮತ್ತು ಡಾ. ಮೀನಾಕ್ಷಿ ಸೊನ್ನದ ಅವರ ಪುತ್ರ.
ನಿಖಿಲ್ ಸೊನ್ನದ ಅವರು 720 ಅಂಕಗಳಿಗೆ 670 ಅಂಕ ಗಳಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇಕಡ 98.3 ಅಂಕ ಗಳಿಸಿದ್ದರು.
