ಸತತವಾಗಿ ಸುರಿದ ಭಾರೀ ಮಳೆಯಿಂದ ಐತಿಹಾಸಿಕ ಕಮಲಾಪುರ ಕೆರೆ ಕೋಡಿಬಿದ್ದು ಕಬ್ಬಿನ ಗದ್ದೆ ಹಾಗೂ ನೂರಾರು ಎಕರೆ ಹೊಲ ಜಲಾವೃತವಾಗಿದೆ. ಜಿಲ್ಲೆಯ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಹರುಷ ಕಾಣುತ್ತಿದೆ.
15 ದಿನದಲ್ಲಿ 2ನೇ ಬಾರಿ ಕೆರೆ ತುಂಬಿ ಹರಿಯುತ್ತಿದ್ದು, ಹಂಪಿಯ ಪರಿಸರದಲ್ಲಿ ಸುರಿದ ಭಾರೀ ಮಳೆಯಿಂದ ವಿಜಯನಗರ ಅರಸರ ಕಾಲದ ಕಾಲುವೆ ತುಂಬಿ ಹರಿದು ರಸ್ತೆಗೆ ನುಗ್ಗಿದ್ದು, ಸಂಚರಿಸಯವ ಪಾದಚಾರಿ, ವಾಹನಗಳಿಗೆ ಕೆಲವು ಗಂಟೆ ಅಸ್ತವ್ಯಸ್ತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕೊಲೆಗೆ ಯತ್ನಿಸಿದ ಆರೋಪ ಸಾಬೀತು; ಅಪರಾಧಿಗೆ 7 ವರ್ಷ ಜೈಲು
ತಾಲೂಕಿನ ಕೆಲವೆಡೆ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಕಮಲಾಪುರದ ಕೆಲವೆಡೆ ಹಾಗೂ ನಗರದ ಹೊರವಲಯದ ರಾಯರಕೆರೆ ಪರಿಸರದ ಜಂಬುನಾಥಹಳ್ಳಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತವಾಗಿವೆ.
ನಗರದ ಕೆಲವು ಖಾಸಗಿ ಶಾಲೆಯ ಎಲ್‌ಕೆಜಿ, ಯುಕೆಜಿ ತರಗತಿ ಹಾಗೂ 1ರಿಂದ 4ನೇ ತರಗತಿ ಮಕ್ಕಳಿಗೆ ಸ್ವಯಂ ಪ್ರೇರಿತ ರಜೆ ಘೋಷಿಸಲಾಯಿತು.