ಗುಬ್ಬಿ | ಮರು ಜಾತಿಗಣತಿ ಸ್ವಾಗತಾರ್ಹ : ಶಾಸಕ ಎಸ್.ಆರ್.ಶ್ರೀನಿವಾಸ್

Date:

Advertisements

ಜಾತಿ ಗಣತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಹಲವು ಭಿನ್ನಾಭಿಪ್ರಾಯಗಳು ಕೂಡಾ ಚರ್ಚೆಯಾಗಿ ಹೊರಬಂತು. ಎಲ್ಲಿ ಹೇಗೆ ಯಾರು ಗಣತಿ ಮಾಡಿದ್ದರು ಎಂಬುದು ಗೊಂದಲವಾಗಿತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮರು ಜಾತಿಗಣತಿಗೆ ಸೂಚಿಸಿದ್ದು ಸ್ವಾಗತಾರ್ಹ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ನಿಟ್ಟೂರು ಪುರ ಕಾಲೊನಿ, ಬೆಲವತ್ತ, ಅತ್ತಿಕಟ್ಟೆ ಗ್ರಾಮದಲ್ಲಿ ಒಟ್ಟು ಮೂರು ಕೋಟಿಯ ಸಿಸಿ ರಸ್ತೆಗಳ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತ ಗೊಂದಲಕ್ಕೆ ತೆರೆ ಎಳೆಯಲು ಎಸ್ಸಿ ಸಮುದಾಯದ ಗಣತಿ ದತ್ತಾಂಶ ಪಡೆಯಲಾಯಿತು. ಇದು ಒಳ ಮೀಸಲಾತಿ ಹಂಚಿಕೆಗೆ ಪೂರಕವಾಗಿದೆ. ಇದೇ ಮಾದರಿ ಸರಿಯಾದ ರೀತಿಯಲ್ಲಿ ಜಾತಿ ಗಣತಿ ನಡೆಯಲಿ ಎಂದು ತಿಳಿಸಿದ ಅವರು ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂಬ ಹೆಸರು ಬೇಕಿಲ್ಲ. ಬೆಂಗಳೂರು ನಗರಕ್ಕೆ ಸಮೀಪದ ತುಮಕೂರು ಎಲ್ಲಾ ರಂಗದಲ್ಲೂ ಬೆಳೆದಿದೆ. ಕೈಗಾರಿಕಾ ವಲಯ ಇಲ್ಲಿ ವಿಸ್ತರಣೆಯಾದ ಕಾರಣ ಬೆಂಗಳೂರು ಹೆಸರು ಇಲ್ಲಿಗೂ ನಾಮಕರಣ ಮಾಡುವ ಉದ್ದೇಶ ಅವರ ಇಚ್ಛೆ. ಆದರೆ ನಮ್ಮ ತುಮಕೂರು ಹೆಸರು ಹಾಗೆಯೇ ಉಳಿಯಲಿ ಎಂಬುದು ನಮ್ಮ ಆಶಯ ಎಂದರು.

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಬಗ್ಗೆ ನಡೆದ ಎಲ್ಲಾ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ ಸರ್ಕಾರದ ಜೊತೆ ಚರ್ಚೆ ಮಾಡಿದ್ದೇನೆ. ತಾಂತ್ರಿಕ ಸಮಿತಿ ಸಭೆ, ಜಿಲ್ಲಾ ಕೆಡಿಪಿ ಸಭೆ, ಕಾವೇರಿ ನಿಗಮದ ಸಭೆ, ಉಪ ಮುಖ್ಯಮಂತ್ರಿಗಳ ಸಭೆ ಎಲ್ಲಡೆ ಹೇಮಾವತಿ ನೀರು ಮುಖ್ಯ ನಾಲೆಯ ಮೂಲಕ ಹರಿಸಿಕೊಳ್ಳಲು ಸೂಚಿಸಲಾಗಿದೆ. ಕುಣಿಗಲ್ ಭಾಗಕ್ಕೆ 3 ಟಿಎಂಸಿ ನೀರು ನಾಲೆಯ ಅಗಲೀಕರಣ ಮಾಡಿ ತೆಗೆದುಕೊಂಡು ಹೋಗಲೀ. ಆದರೆ ಮಾಗಡಿವರೆಗೆ ಪೈಪ್ ಕಾಮಗಾರಿ ಮಾಡಿದ್ದಾರೆ. ಮಾಗಡಿ, ಕುಣಿಗಲ್ ನಲ್ಲಿ ಹೋರಾಟ ಎಲ್ಲವೂ ರಾಜಕೀಯ ಮೇಲಾಟ ಎನಿಸಿದೆ. ನೀರಿನ ವಿಚಾರಕ್ಕೆ ರಾಜಕಾರಣ ಬೆರೆಯಬಾರದು. ನಾಲೆಯ ವಿನ್ಯಾಸ ಹೆಚ್ಚಿಸಿಕೊಂಡು ನೀರು ಹಂಚಿಕೆ ಹೆಚ್ಚಿಸಿಕೊಂಡು ನಮ್ಮ ನೀರು ನಮಗೆ ಬಿಟ್ಟು ನಂತರ ನೀರು ತೆಗೆದುಕೊಂಡು ಹೋಗಲಿ ಎಂದ ಅವರು ಶಾಸಕ ರಂಗನಾಥ್ ಕಾಮಗಾರಿ ನಡೆಸಲು ಸ್ಥಳ ಪರಿಶೀಲನೆ ಮಾಡುತ್ತಾರೆ. ನಮಗೆ ಕಾಮಗಾರಿ ನಡೆಯುವುದು ಬೇಕಿಲ್ಲ ಎಂದರು.

Advertisements

ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಗೆದ್ದ ಆರ್ ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತಕ್ಕೆ ಸರ್ಕಾರ ಹೊಣೆ ಎನ್ನುವುದು ಸರಿಯಲ್ಲ. ಗುಜರಾತ್ ವಿಮಾನ ಪತನಕ್ಕೆ ಕೇಂದ್ರ ಸರ್ಕಾರ ಕಾರಣ ಎನ್ನಲಾಗದು. ನಡೆಯಬಾರದು ನಡೆದರೆ ಕೈಮೀರಿದ ಸನ್ನಿವೇಶಗಳು ಎನ್ನಬಹುದು. ಸರ್ಕಾರಗಳನ್ನು ಹೊಣೆ ಮಾಡುವುದು ಔಚಿತ್ಯವಲ್ಲ ಎಂದ ಅವರು ಸಿಸಿ ರಸ್ತೆ ಕಾಮಗಾರಿ ನಿರಂತರ ನಡೆದಿದೆ. ಬಹುತೇಕ ಗ್ರಾಮಗಳಲ್ಲಿ ರಸ್ತೆ ಕೆಲಸ ನಡೆದಿದೆ. ಇನ್ನೂ 25 ಕೋಟಿ ಅನುದಾನ ಬರಲಿದೆ. ಹೇಮಾವತಿ ಇಲಾಖೆ ಮೂಲಕ ನೂರು ಕೋಟಿ ಮಂಜೂರು ಆಗಲಿದೆ. ಮಠದಹಳ್ಳ ಕೆರೆಗೆ ಹೇಮಾವತಿ ಹರಿಸುವ ಕಾಮಗಾರಿಗೆ ವಾರದಲ್ಲಿ ಚಾಲನೆ ಸಿಗಲಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ, ಶ್ರೀ ಕಲ್ಲೇಶ್ವರ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಶಂಕರಾನಂದ ಮಾತನಾಡಿ ನಿಟ್ಟೂರು ಪುರ ಗ್ರಾಮದ ಕಲ್ಲೇಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಮುಜರಾಯಿ ಇಲಾಖೆಗೆ ಸಂಬಂಧಿತ ದೇವಾಲಯ ಕಾಮಗಾರಿಗೆ ಶಾಸಕರು ಆರ್ಥಿಕ ನೆರವು ನೀಡಲು ಒಪ್ಪಿದ್ದಾರೆ. ಈ ಜೊತೆಗೆ ಪುರ ಕಾಲೋನಿಗೆ ಒಂದು ಕೋಟಿ ರೂಗಳ ಸಿಸಿ ರಸ್ತೆ ಕಾಮಗಾರಿ ನಡೆಸಿರುವುದು ಸಂತಸದ ವಿಚಾರ. ನಿಟ್ಟೂರು ಹೋಬಳಿಯಲ್ಲಿ ಎಲ್ಲಾ ಗ್ರಾಮೀಣ ರಸ್ತೆ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದಾರೆ ಎನ್ನುವ ವಿಚಾರ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಂಜೇಗೌಡ, ಬೆಲವತ್ತ ಗ್ರಾಪಂ ಅಧ್ಯಕ್ಷೆ ಲತಾ ದಯಾನಂದ್, ಉಪಾಧ್ಯಕ್ಷ ಆನಂದ, ಸದಸ್ಯರಾದ ಎನ್.ಬಿ.ರಾಜಶೇಖರ್, ವೆಂಕಟೇಶ್, ಜಯಮ್ಮ, ತಾರಾದೇವಿ, ಸ್ವಾಮಿ, ರವೀಶ್, ಪ್ರದೀಪ್, ರೂಪಕಲಾ, ಮುಖಂಡರಾದ ಎನ್.ಸಿ.ಶಿವಣ್ಣ, ಬೆಲವತ್ತ ಶಿವಕುಮಾರ್, ಗುತ್ತಿಗೆದಾರ ಅರುಣ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X