ಲಾಲು ಪ್ರಸಾದ್ ಯಾದವ್ ಅವರ ಪುತ್ರ ಮತ್ತು ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಕಾಶಿ ದೇವಾಲಯದ ನಿರ್ಬಂಧಿತ ಸ್ಥಳದಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಾಶಿ ವಿಶ್ವನಾಥ ದೇವಾಲಯ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
ಕಾಶಿ ವಿಶ್ವನಾಥ ಕಾರಿಡಾರ್‌ನೊಳಗಿನ ಪ್ರದೇಶವಾಗಿದ್ದು, ಇಲ್ಲಿ ದೇವಾಲಯದ ಆವರಣವೂ ಇದೆ. ಈ ಪ್ರದೇಶದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನೂ ಮಾಡುವಂತಿಲ್ಲ. ಆದರೆ ಈ ನಿರ್ಬಂಧಿತ ಪ್ರದೇಶದಲ್ಲಿ ತೇಜ್ ಪ್ರತಾಪ್ ಇರುವ ವಿಡಿಯೋ ಗುರುವಾರದಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಶಾಸಕ ತೇಜ್ ಪ್ರತಾಪ್ ಯಾದವ್ ಆಜ್ಞೆಯಂತೆ ಕುಣಿದ ಕಾನ್‌ಸ್ಟೆಬಲ್ ಅಮಾನತು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕಾಶಿ ವಿಶ್ವನಾಥ ದೇವಾಲಯದ ಸಿಇಒ ವಿಶ್ವಭೂಷಣ್ ಮಿಶ್ರಾ, “ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ವಿವಿಧ ಪತ್ರಿಕೆಗಳ ಮೂಲಕ ದೇವಾಲಯ ಆಡಳಿತ ಮಂಡಳಿಗೆ ಈ ವಿಡಿಯೋ ಬಗ್ಗೆ ತಿಳಿದುಬಂದಿದೆ” ಎಂದಿದ್ದಾರೆ.
बाबा विश्वनाथ का आशीर्वाद हो,
— Tej Pratap Yadav (@TejYadav14) June 13, 2025
माँ गंगा का निर्मल पवित्र घाट हो,
पूरी दुनिया को मैं भूल जाऊं और
बनारस में मेरा भोला मुझे याद हो हर हर महादेव बोलना ही होगा। …#Varanasi pic.twitter.com/Uq5tS32evB
ಹಾಗೆಯೇ ಈ ಬಗ್ಗೆ ದೇವಾಲಯದ ಭದ್ರತೆ ಜವಾಬ್ದಾರಿ ಹೊಂದಿರುವ ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. “ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಮತ್ತು ಸಂಬಂಧಪಟ್ಟ ಸಂಸ್ಥೆಯ ಜವಾಬ್ದಾರಿಯುತ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಮೀಸಲು ಪೊಲೀಸ್ ಪಡೆ(CRPF) ಮತ್ತು ಸ್ಥಳೀಯ ಪೊಲೀಸ್ ಆಡಳಿತಕ್ಕೆ ಮಾಹಿತಿಯನ್ನು ಕಳುಹಿಸಲಾಗಿದೆ” ಎಂದು ವಿಶ್ವಭೂಷಣ್ ಮಿಶ್ರಾ ಹೇಳಿದ್ದಾರೆ.
“ದೇವಾಲಯದ ಆವರಣದಲ್ಲಿ ನಿಗದಿತ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ನೋಡಿಕೊಳ್ಳಲು ಎರಡೂ ಸಂಸ್ಥೆಗಳನ್ನು ಕೋರಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದ ಯಾವುದೇ ಸಿಬ್ಬಂದಿಯನ್ನು ಗುರುತಿಸಲಾಗುತ್ತದೆ. ನಿಯಮಗಳ ಉಲ್ಲಂಘನೆ ಕಂಡುಬಂದರೆ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
ಮೇ 25ರಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರು ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ.
