ನಿರಂತರವಾಗಿ ವಿದೇಶ ಪ್ರವಾಸದಲ್ಲೇ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಟೀಕಿಸಿದೆ. ವಿದೇಶಕ್ಕೆ ಪ್ರವಾಸ ಹೋಗುವಷ್ಟು ಶಕ್ತಿಯಿರುವ ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡುವ ಸಹಾನುಭೂತಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪೋಸ್ಟ್ ಮಾಡಿದ್ದಾರೆ. “ಪ್ರಧಾನ ಮಂತ್ರಿಗಳು ಇಂದು ಬೆಳಿಗ್ಗೆ ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾಕ್ಕೆ ತೆರಳಿದ್ದಾರೆ. ಈ ವಿದೇಶ ಭೇಟಿಗಳಿಗೆ ಪ್ರಧಾನಿಗೆ ಶಕ್ತಿ(energy), ಉತ್ಸಾಹ(excitement) ಮತ್ತು ಹುರುಪು(enthusiasm) ಎಂಬ ಮೂರು ‘ಇ(E)’ಗಳೂ ಇವೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಭಾರೀ ವಿಶ್ವಾಸದ ಮೋದಿಯ ವಿದೇಶಿ ಸಂಬಂಧಗಳು ಕುಸಿದುಬೀಳಲಿವೆಯೇ?
ಜಿ 7 ಶೃಂಗಸಭೆಯು ಜೂನ್ 15ರಿಂದ 17ರವರೆಗೆ ಕೆನಡಾದಲ್ಲಿ ನಡೆಯಲ್ಲಿದ್ದು ಈ ಶೃಂಗಸಭೆಗೆ ಕೆನಡಾ ಭಾರತವನ್ನು ಆಹ್ವಾನಿಸಿಲ್ಲ. ಈ ವಿಚಾರದಲ್ಲಿಯೂ ಕಾಂಗ್ರೆಸ್ ನಾಯಕ ಪ್ರಧಾನಿಯನ್ನು ಟೀಕಿಸಿದ್ದಾರೆ. “ಭಾರತಕ್ಕೆ ಆಹ್ವಾನ ನೀಡಲು ಕೆನಡಾ ವಿಳಂಬ ಮಾಡುತ್ತಿರುವುದು ಕಂಡುಬಂದಾಗ ಮೋದಿಯವರ ಬಗ್ಗೆ ಡಂಗುರ ಸಾರುವವರೂ ಕೆನಡಾ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಹೇಳಿಕೊಂಡರು” ಎಂದು ವ್ಯಂಗ್ಯವಾಡಿದ್ದಾರೆ.
“ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಆಗಿರುವುದರಿಂದ ಭಾರತವನ್ನು ಜಿ7 ಶೃಂಗಸಭೆಗೆ ಆಹ್ವಾನಿಸಲಾಗಿದೆ ಎಂದು ಕೆನಡಾದ ಪ್ರಧಾನಿ ಹೇಳಿದ್ದಾರೆ. ಆದರೆ ನೀತಿ ಆಯೋಗದ ಸಿಇಒ ಪ್ರಕಾರ 2025ರ ಮೇ 24ರಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂಬುದನ್ನು ಪ್ರಧಾನಿ ಮೋದಿ ಅವರು ಕೆನಡಾ ಪ್ರಧಾನಿಗೆ ನೆನಪಿಸಬೇಕು” ಎಂದು ಪೋಸ್ಟ್ ಮಾಡಿದ್ದಾರೆ.
The Prime Minister leaves for Cyprus, Canada, and Croatia this morning.
— Jairam Ramesh (@Jairam_Ramesh) June 15, 2025
There was a time when he boasted about his knowledge of algebra by spouting the (a+b)^2 equation as applicable to India and Canada. But things went horribly wrong thereafter. When it appeared that Canada… pic.twitter.com/tFU8eRnFnS
“2023ರ ಮೇ ತಿಂಗಳಿನಿಂದ ಈವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 35ನೇ ಬಾರಿ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಈ ವಿದೇಶ ಪ್ರವಾಸಕ್ಕೆ ಅವರಿಗೆ ಮೂರು ‘ಇ’ಗಳಾದ ಶಕ್ತಿ(energy), ಉತ್ಸಾಹ(excitement) ಮತ್ತು ಹುರುಪು(enthusiasm) ಇರುತ್ತದೆ. ಆದರೆ ಮಣಿಪುರಕ್ಕೆ ಹೋಗಲು ನಾಲ್ಕನೇ ಈ ಸಹಾನಭೂತಿ(empathy) ಇಲ್ಲವೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನು ಓದಿದ್ದೀರಾ? ಕೆನಡಾದಲ್ಲಿ ಜಿ 7 ಶೃಂಗಸಭೆ: ಪ್ರಧಾನಿ ನರೇಂದ್ರ ಮೋದಿಗಿಲ್ಲ ಆಹ್ವಾನ
“ಮಣಿಪುರದಲ್ಲಿ ಜನರ ಸಂಕಷ್ಟ, ನೋವು ಹಾಗೆಯೇ ಇದೆ. 2023ರ ಮೇ 3ರಿಂದ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿಲ್ಲ, ಮಣಿಪುರದ ರಾಜಕೀಯ ನಾಯಕರನ್ನೂ ಭೇಟಿಯಾಗಿಲ್ಲ. ಮಣಿಪುರವನ್ನು ಈ ರೀತಿ ಭೀಕರವಾಗಿ ನಡೆಸಿಕೊಂಡ ಪ್ರಧಾನಿಯ ವರ್ತನೆ ಶೋಚನೀಯ” ಎಂದು ಕಾಂಗ್ರೆಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ 2015ರ ಪ್ರಧಾನಿಯವರ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
