ದಾವಣಗೆರೆಯಲ್ಲಿ 2025 ಆಗಸ್ಟ್ 9 ಮತ್ತು 10ರಂದು ರೈತ ಕಲ್ಯಾಣೋತ್ಸವ ಸಮಾವೇಶ ಆಯೋಜಿಸಲಾಗಿದ್ದು, ರೈತರು ಮತ್ತು ಬಡ ವರ್ಗದ ಮಕ್ಕಳ 1008 ಜೋಡಿಗಳಿಗೆ ಉಚಿತ ಸಾಮೂಹಿಕ ಮದುವೆ ಮಾಡಲಾಗುವುದು ಎಂದು ಕರ್ನಾಟಕ ರೈತೋದಯ ಹಸಿರು ಸೇನೆಯ ದಾವಣಗೆರೆ ಜಿಲ್ಲಾಧ್ಯಕ್ಷ ಕೆ ಜಿ ರೇವಣಸಿದ್ದಪ್ಪ ವಿವಾಹೋತ್ಸವದ ಬಗ್ಗೆ ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲೆಯ ಜಗಳೂರು ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರುಸೇನೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರೈತ ಕಲ್ಯಾಣೋತ್ಸವ ಸಮಾವೇಶದ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು.
“ಮುಂದಿನ ದಿನಗಳಲ್ಲಿ ರೈತರು ಮತ್ತು ಬಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸಬೇಕು. ಹಾಗೂ ವಧು-ವರರಿಗೆ ಉಡುಗೊರೆಯಾಗಿ ಮನೆ ನೀಡುವ ಯೋಜನೆ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಿ ಟಿ ನೇತೃತ್ವದಲ್ಲಿ ಬಡ ವರ್ಗದವರಿಗೆ ಮತ್ತು ರೈತಾಪಿ ವರ್ಗಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ. ರೈತ ಕಲ್ಯಾಣೋತ್ಸವಕ್ಕೆ ವಿಶಾಲವಾದ ಸ್ಥಳದ ಅವಶ್ಯಕತೆ ಇದೆ. ಉಚಿತ ಸಾಮೂಹಿಕ ವಿವಾಹಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸುಮಾರು 10 ಎಕರೆ ವಿಶಾಲವಾದ ಜಾಗದ ವ್ಯವಸ್ಥೆ ಮಾಡಿಕೊಡುವಂತೆ ದಾವಣಗೆರೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ” ಎಂದರು.
ಸಂಘದ ರಾಜ್ಯ ಕಾರ್ಯದರ್ಶಿ ಸುವರ್ಣಮ್ಮ ಮಾತನಾಡಿ, “ಉಚಿತ ವಿವಾಹಕ್ಕೆ ಆಗಮಿಸುವ ವಧು-ವರರ ಸಾರಿಗೆ ವೆಚ್ಚವನ್ನು ಭರಿಸಲಾಗುವುದು. ವಧು-ವರರಿಗೆ ಬಟ್ಟೆ, ತಾಳಿ, ವಧುವಿಗೆ ಕಾಲು ತೊಳೆಯುವ ಶಾಸ್ತ್ರದ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ವಿವಾಹ ನೋಂದಣಿ ಮಾಡಿಸಿಕೊಳ್ಳುವವರು ಜಿಲ್ಲಾಧ್ಯಕ್ಷ ಕೆ ಜಿ ರೇವಣಸಿದ್ದಪ್ಪ(9964847547), ಕಾರ್ಯದರ್ಶಿ(9845332145), ಜಗಳೂರು ನಾಗಭೂಷಣ ರಾಜ್ಯ ಸುವರ್ಣಮ್ಮ(9513792895), ಜಿಲ್ಲಾ, ತಾಲೂಕು ಅಧ್ಯಕ್ಷ(9535858074)ರನ್ನು ಸಂಪರ್ಕಿಸಬಹುದು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕರೆ ಮೀಸಲಾತಿ ನಿಲ್ಲಿಸೋಣ, ಆದರೆ ಪ್ರಾತಿನಿಧ್ಯವಿಲ್ಲ; ದಿನೇಶ್ ಅಮೀನ್ ಮಟ್ಟು
ದಾವಣಗೆರೆ ರೈತೋದಯ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಗಣೇಶ್, ತಾಲೂಕು ಉಪಾಧ್ಯಕ್ಷ ಗಣೇಶ್, ಜಿಲ್ಲಾ ಸಂಚಾಲಕ ನಾಗರಾಜ್, ಚನ್ನಗಿರಿ ತಾಲೂಕು ಉಪಾಧ್ಯಕ್ಷ ಶಿವಮೂರ್ತಿ ನಾಯ್ಕ, ಜಗಳೂರು ತಾಲೂಕು ಉಪಾಧ್ಯಕ್ಷ ಪೆದ್ದಪ್ಪ ಸೇರಿದಂತೆ ಇತರರು ಇದ್ದರು.