ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆ ಹಟ್ಟಿ ಗ್ರಾಮದ ಹೋಟೆಲ್ ಒಂದರಲ್ಲಿ ನಗದು, ಪಾತ್ರೆ, ಬ್ಯಾಟರಿ ಮೊದಲಾದ ವಸ್ತುಗಳ ಕಳುವಾಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲಿಸರು ಆರೋಪಿಯನ್ನ ಪತ್ತೆ ಮಾಡಿ ಬಂಧಿಸುವ ಮೂಲಕ ಒಟ್ಟು 6,40,000 ರೂ.ಗಳ ಮೌಲ್ಯದ ವಸ್ತು ಮತ್ತು ನಗದನ್ನ ವಶಕ್ಕೆ ಪಡೆದಿದ್ದಾರೆ.
ಭದ್ರಾವತಿ ತಾಲೂಕಿನ ಎಮ್ಮೆ ಹಟ್ಟಿ ಗ್ರಾಮದ ಶಿವಾಜಿರಾವ್ ಎಂಬುವವರು, ದಿನಾಂಕ: 04-ಏಪ್ರಿಲ್ -2025 ರಂದು ಹೋಟೇಲ್ ನಲ್ಲಿ ಕಳುವು ಪ್ರಕರಣ ನಡೆದಿರುವ ಕುರಿತಾಗಿ, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖಾ ತಂಡವು ದಿನಾಂಕ :- 14-ಜೂನ್ -2025 ರಂದು ಪ್ರಕರಣದ ಆರೋಪಿಯಾದ ರಾಕೇಶ ಹೆಚ್ ಕೆ, 27 ವರ್ಷ, ಹೊಸನಗರದ ನಗರ ಹೋಬಳಿಯ ಹೆಂಡೆಗದ್ದೆ ಮೂಡಗೊಪ್ಪ ಗ್ರಾಮದ ಆರೋಪಿಯನ್ನು ದಸ್ತಗಿರಿ ಮಾಡಿ, ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದ 05 ಬ್ಯಾಟರಿ ಅಂದಾಜು ಮೌಲ್ಯ 60,000/- ರೂ, ಅಡುಗೆ ಪಾತ್ರೆಗಳು ಅಂದಾಜು ಮೌಲ್ಯ 80,000/- ರೂ ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಅಂದಾಜು ಬೆಲೆ 5,00,000/- ಸೇರಿ ಒಟ್ಟು 6,40,000/- ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
