ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರದ ಹಲವು ಇಲಾಖೆಗಳಂತೆ, ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುವ ವಲಯವೆಂದರೆ ಅದು ಪತ್ರಕರ್ತರ ವಲಯ. ಪತ್ರಕರ್ತರು ದಿನನಿತ್ಯ ಸುದ್ದಿ ಮಾಡುವ ಒತ್ತಡದಲ್ಲಿರುತ್ತಾರೆ. ಸುದ್ದಿಗಾಗಿ ಓಡಾಡುತ್ತಿರುತ್ತಾರೆ. ಆ ಒತ್ತಡದ ಓಡಾಟದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ಅವರಿಂದು ನಗರದ ಪೊಲೀಸ್ ಮೈದಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಲು ಶಾರೀರಿಕ ಸದೃಢತೆ ಅತ್ಯಂತ ಮುಖ್ಯವಾಗಿದ್ದು, ದಿನನಿತ್ಯ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಪತ್ರಕರ್ತರು ಶರೀರದ ಆರೋಗ್ಯ ಹೆಚ್ಚಿನ ಒತ್ತು ಕೊಡಬೇಕೆಂದು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲೂಕು ವರದಿಗಾರರ ತಂಡ ಹಾಗೂ ಜಿಲ್ಲಾ ಕೇಂದ್ರದ ಎರಡು ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ಪಂದ್ಯಾವಳಿಯಲ್ಲಿ ಸೋಲು, ಗೆಲುವು ಸಾಮಾನ್ಯ ಕ್ರೀಡೆಯಲ್ಲಿ ಸ್ಪೂರ್ತಿಯಿಂದ ಭಾಗವಹಿಸುವುದು ಅತ್ಯಂತ ಮುಖ್ಯ, ಕ್ರೀಡಾ ಸ್ಪೂರ್ತಿಯಿಂದ ಪಂದ್ಯಾವಳಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ಎಂದು ತಿಳಿಸಿದರು.
ಬೆಳಿಗ್ಗೆಯ ನಡಿಗೆ(ವಾಕಿಂಗ್) ಬಹಳ ಮುಖ್ಯ, ನಾವು ದಿನನಿತ್ಯ ಮಾಡುವ ಊಟದಂತೆ ವಾಕಿಂಗ್ ಅನ್ನು ಮರೆಯಬಾರದು. ಮನಸ್ಸನ್ನು ಸ್ಥಿರವಾಗಿರಿಸಿದರೆ. ಎಲ್ಲವೂ ಸಾಧ್ಯವಾಗುತ್ತದೆ. ಬೆಳಿಗ್ಗೆ ಸಾಧ್ಯವಾಗದೇ ಇದ್ದರೆ ಸಂಜೆ ವೇಳೆಯಲ್ಲಿ ಆದರೂ ವಾಕಿಂಗ್ ಮಾಡಲು ಮುಂದಾಗಬೇಕು. ಸಮಾಜದ ಉದ್ದಾರಕ್ಕಾಗಿ ಪ್ರಗತಿಗಾಗಿ, ಪತ್ರಕರ್ತರು ದಿನನಿತ್ಯ ಶ್ರಮಿಸುತ್ತಾರೆ. ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಿರಾಣಿ ಅಂಗಡಿಯಲ್ಲಿ ಕಳ್ಳತನ ; ಇಬ್ಬರ ಬಂಧನ
ಇದೇ ವೇಳೆ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಕ್ರೀಡೆ ಎಂಬುದು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಅತ್ಯಂತ ಮುಖ್ಯವಾಗಿದ್ದು, ಒತ್ತಡದ ಬದುಕಿನ ಮಧ್ಯೆ ಮಾನಸಿಕ ನೆಮ್ಮದಿಗೆ ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಾಂತವೀರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ, ಹಿರಿಯ ಪತ್ರಕರ್ತರಾದ ಸುರೇಂದ್ರಾಚಾರ್ ಕೊರ್ತಕುಂದ, ರಾಯಚೂರುವಾಣಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಅರವಿಂದ ಕುಲಕರ್ಣಿ, ಕಂಪಿಲವಾಣಿ ಸಂಪಾದಕ ಭೀಮರಾಯ್ ಹದ್ದಿನಾಳ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೆಮಠ, ಜಿಲ್ಲಾ ಕಾರ್ಯದರ್ಶಿ ಪಾಷಾ ಹಟ್ಟಿ, ಪ್ರಜಾಪ್ರಸಿದ್ಧ ಪತ್ರಿಕೆಯ ಸಂಪಾದಕ ಶಿವರಾಜ, ಸಿಟಿ ಎಲೆವೆನ್ ಕ್ರಿಕೆಟ್ ಕ್ಲಬ್ ನ ಮುಖ್ಯಸ್ಥ ಶರಣರೆಡ್ಡಿ, ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.
