ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸುವ ಮಹತ್ವಾಕಾಂಕ್ಷೆಯ ‘ಆ್ಯಕ್ಸಿಯಂ-4’ ಮಿಷನ್ ಅನ್ನು 19ಕ್ಕೂ ಮುನ್ನ ನಡೆಸುವ ಯೋಜನೆ ಇಲ್ಲ ಎಂದು ಇಸ್ರೋ ತಿಳಿಸಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೋ, “ನಾಸಾ, ಆ್ಯಕ್ಸಿಯಂ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ಸಹಯೋಗದಲ್ಲಿ ಈ ಯೋಜನೆ ನಡೆಯುತ್ತಿದೆ. ಆಕ್ಷಿಯಂ ಸ್ಪೇಸ್ ಮತ್ತು ಭಾರತೀಯ ವಿಜ್ಞಾನಿಗಳ ಸಮನ್ವಯತೆಯಲ್ಲಿ ಕಾಲಮಿತಿಯೊಳಗೆ ಪರೀಕ್ಷಾ ಮಾದರಿಗಳ ನಿರ್ವಹಣೆ ಮಾಡಲಾಗುತ್ತದೆ” ಎಂದು ಹೇಳಿದೆ.