ಶಿವಮೊಗ್ಗದಲ್ಲಿ ಕಳೆದೆರೆಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯಾದ್ಯಂತ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಇದೇ ವೇಳೆ ಗೋಡೆ ಕುಸಿತದಿಂದ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಆಯನೂರು ಬಳಿಯಿರುವ ಮಂಡಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗಡಿಯಲ್ಲಿ ಸಿದ್ದಮ್ಮ ಎಂಬುವವರು ನಿನ್ನೆ ರಾತ್ರಿ ಗೋಡೆ ಕುಸಿತದಿಂದ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹೇಮಾವತಿ, ಪರಶುರಾಮ್, ಪಲ್ಲವಿ ಹಾಗೂ ಚೇತನ್ ಎಂಬುವವರಿಗೆ ಗಾಯಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಮಳೆ ಅಬ್ಬರ: ಗುಡ್ಡ ಕುಸಿಯುವ ಆತಂಕ
ಹೇಮಾವತಿ ಅವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಮ್ಮ ಎಂಬುವವರು ಮೂಲತಃ ದಾವಣಗೆರೆಯವರಾಗಿದ್ದು, ಆಡುಗಡಿಯ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ದುರಾದೃಷ್ಟವಶಾತ್ ಇಂತಹ ದುರ್ಘಟನೆ ನಡೆದಿದೆ.