“ಕಮಲ್ ಹಾಸನ್ ಅವರು ಕನ್ನಡಿಗರ ಋಣದಲ್ಲಿ ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಅವರ ಈ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದು, ಕೂಡಲೇ ಅವರು ಕ್ಷಮೆ ಕೇಳಬೇಕು” ಎಂದು ಕರವೇ ಜಿಲ್ಲಾಧ್ಯಕ್ಷ ಎಂ ಪಿ ಪಾರ್ವತಗೌಡ ಒತ್ತಾಯಿಸಿದರು.
ಗದಗ ಪಟ್ಟಣದಲ್ಲಿ ಪಾಳಾ-ಬಾದಾಮಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಕನ್ನಡಕ್ಕೆ ಅವಮಾನಿಸಿದ ಬಹುಭಾಷಾ ನಟ ಕಮಲ್ ಹಾಸನ್ ಅವರ ಚಿತ್ರವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕರವೇ (ಶಿವರಾಮೇಗೌಡ್ರ ಬಣ) ವತಿಯಿಂದ ಪ್ರತಿಭಟಿಸಿ ತಹಸೀಲ್ದಾರರಿಗಮನವಿ ಸಲ್ಲಿಸಿ ಮಾತನಾಡಿದರು.
“ಕರ್ನಾಟಕ ಹೈಕೋರ್ಟ್ ಕೂಡ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿತ್ತು. ಜೊತೆಗೆ ಕ್ಷಮೆ ಕೇಳುವಂತೆ ಸೂಚಿಸಿತ್ತು. ಹಠಮಾರಿ ಕಮಲ್ ಹಾಸನ್ ತನ್ನ ನೀಚ ಬುದ್ದಿ ಬಿಡುತ್ತಿಲ್ಲ. ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರ ಕ್ಷಮೆ ಕೇಳದಿದ್ದರೇ ನಾವು ನಿನ್ನ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ” ಎಂದು ಕಮಲ್ ಹಾಸನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
“ಕಮಲ್ ಹಾಸನ್ ಅವರು ಇತ್ತಿಚೆಗೆ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡಿಗರಿಗೆ ಅವಮಾನಿಸಿದರೇ ತನಗೆ ರಾಜಕೀಯ ಲಾಭ ಆಗುತ್ತದೆ ಎನ್ನುವ ದುರುದ್ದೇಶ ಇಟ್ಟುಕೊಂಡು ಅವಮಾನಿಸಿದ್ದಾರೆ. ನಿಮ್ಮ ಈ ನೀತಿಯನ್ನು ತಮಿಳರು ಕ್ಷಮಿಸುವುದಿಲ್ಲ. ರಾಜ್ಯ-ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಜನ ಸಹಿಸುವುದಿಲ್ಲ. ರಾಜಕೀಯದಲ್ಲಿ ಈಗಾಗಲೇ ನೀವು ನಿಮ್ಮ ಅಸ್ತಿತ್ವ ಕಳೆದುಕೊಂಡಿದ್ದಿರಿ. ಇಂತಹ ಹೇಳಿಕೆಗಳಿಂದ ಪುಟಿದೆಳುತ್ತೇನೆ ಎನ್ನುವ ನಿಮ್ಮ ತಪ್ಪು ಕಲ್ಪನೆಯಿಂದ ದೂರವಿರಿ. ನಿಮ್ಮ ರಾಜಕಾರಣ ನಿಮ್ಮ ರಾಜ್ಯದಲ್ಲಿರಲಿ. ಆದರೆ, ಕನ್ನಡಿಗರನ್ನು ಅವಮಾನಿಸುವ ಹೇಳಿಕೆಯನ್ನು ಯಾರೂ ಸಹಿಸುವುದಿಲ್ಲ. ಇನ್ನೂ ಕಾಲ ಮಿಂಚಿಲ್ಲ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ನಮ್ಮ ಹೋರಾಟ ನಿರಂತರವಾಗಿರುತ್ತೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕರ್ತವ್ಯ ಲೋಪ ಎಸಗಿದ್ದಕ್ಕೆ ಪಿಡಿಒ ಅಮಾನತು
ಈ ಪ್ರತಿಭಟನೆ ಕರವೇ ಉತ್ತರ ಕರ್ನಾಟಕ ರೈತ ಘಟಕದ ಅಧ್ಯಕ್ಷ ಬಸಯ್ಯ ಗುಡ್ಡಿಮಠ, ಜಿಲ್ಲಾ ಗೌರವಾದ್ಯಕ್ಷ ಸುನೀಲ ಭಾರಕೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಜಿಲ್ಲಾ ಹಮುಖಂಡರು ಬಶೀರ ಮುಳಗುಂದ, ಶಂಕ್ರಪ್ಪ ಬಿಂಗಿ, ಗದಗ ತಾಲೂಕಾಧ್ಯಕ್ಷ ಸಂತೋಷ ಕುಂಬಾರ, ಪ್ರಸಾದ ಪಾಟೀಲ, ಶರಣಪ್ಪ ಅಡ್ನುರ, ಮುತ್ತು ಬಿಳಿಯಲಿ, ಶರಣಪ್ಪ ಮಣ್ಣೂರ, ಮಂಜುನಾಥ ಕುರ್ತಕೋಟಿ, ಮೈಲಾರಿ ತಡಹಾಳ, ಕೊಟ್ರೇಶ ತಡಹಾಳ, ವಿರೇಶ ಬೊಮ್ಮಸಾಗರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.