ಕಾಂಗ್ರೆಸ್ ದುರಾಡಳಿತ ನೋಡಿ ಬೇಸತ್ತ ರಾಜ್ಯದ ಜನರ ಬಾಯಲ್ಲಿ ಕುಮಾರಸ್ವಾಮಿ ಆಳ್ವಿಕೆ ಮತ್ತೊಮ್ಮೆ ಬೇಕಿದೆ. 2028 ಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ ಎಂಬ ಜನತೆ ಕನಸು ನನಸು ಮಾಡಲು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸೇವೆ ಅಗತ್ಯವಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ಗುಬ್ಬಿ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜೆಡಿಎಸ್ ಇಂದಿಗೂ ಸದೃಢವಾಗಿ ಉಳಿದಿದೆ. ಕುಮಾರಣ್ಣನವರ ಆಡಳಿತಕ್ಕೆ ರಾಜ್ಯದ 224 ಕ್ಷೇತ್ರದಲ್ಲಿಯೂ ಪ್ರವಾಸ ಕಾರ್ಯಕ್ರಮ ಆಯೋಜನೆ ಮಾಡಿದ್ದು ಮೊದಲ ಹಂತದಲ್ಲಿ 123 ಕ್ಷೇತ್ರದಲ್ಲಿ ಪ್ರವಾಸ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಈಗ ನಡೆದಿದೆ. ಕಾರ್ಯಕರ್ತರ ಒಗ್ಗೂಡಿಸುವ ಕೆಲಸ ಚುರುಕು ಮಾಡಲಾಗುವುದು ಎಂದು ಹೇಳಿದರು.
ಜನರೊಂದಿಗೆ ಜನತಾದಳ ಎಂಬ ಘೋಷಣೆ ಇತ್ತೀಚಿನದಲ್ಲ. ಪಕ್ಷ ಕಟ್ಟಿದಾಗಲೇ ಬಂದಿದ್ದು ಇಂದಿಗೂ ಪಕ್ಷ ಜನರೊಂದಿಗೆ ಇದೆ. ಕಟ್ಟಾಳುಗಳ ಶ್ರಮದ ಫಲ ಮತ್ತೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕ್ಷೇತ್ರದಲ್ಲಿ ನೇತೃತ್ವ ವಹಿಸಿದ ಮುಖಂಡರು ಸಮಚಿತ್ತದಿಂದ ಕಾರ್ಯಕರ್ತರನ್ನು ನಡೆಸಿಕೊಳ್ಳಬೇಕು. ಕೇವಲ ಒಂದು ಸಾವಿರ ದಿನ ಮಾತ್ರ ಉಳಿದಿದೆ. ಪ್ರತಿನಿತ್ಯ ಜನರೊಟ್ಟಿಗೆ ಬೆರೆತು ಸೇವಕಾರ್ಯ ಮಾಡುತ್ತಾ ಕಾರ್ಯಕರ್ತರನ್ನು ಜೊತೆಗಿಟ್ಟುಕೊಂಡು ದಿನಕ್ಕೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಸ ಮಾಡುವ ಕೆಲಸ ಮಾಡಬೇಕು. ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಮಿಸ್ ಕಾಲ್ ನೀಡಲು ಪಕ್ಷ ಪ್ರಕಟಿಸಿದ ಮೊಬೈಲ್ ನಂಬರ್ 9964002028 ಸಂಖ್ಯೆಯಲ್ಲಿ 2028 ಎಂಬ ಕೊನೆಯ ಸಂಖ್ಯೆ ಜೆಡಿಎಸ್ ಅಧಿಕಾರಕ್ಕೆ ಎಂಬ ಅಂಶವನ್ನು ಸೂಚಿಸಿದೆ ಎಂದರು.
ಕಾಂಗ್ರೆಸ್ ದುರಾಡಳಿತದ ಬಗ್ಗೆ ಜನರಿಗೆ ಹೇಳುವ ಅಗತ್ಯವೇ ಇಲ್ಲ. ಎಲ್ಲಾ ಹಗರಣ ಬಯಲಿಗೆ ಬಂದಿದೆ. ಬರುತ್ತಲೂ ಇದೆ. ರೈತರಿಗೆ ಯಾವ ಸೌಲಭ್ಯ ನೀಡದ ಕಾಂಗ್ರೆಸ್ ಸರ್ಕಾರ ವಿದ್ಯುತ್ ಪರಿವರ್ತಕ ಸುಟ್ಟರೆ 3 ಲಕ್ಷ ಹಣ ಕೊಡಬೇಕಿದೆ. ಈ ಹಿಂದೆ ಕುಮಾರಣ್ಣ ಅವರ ಕಾಲದಲ್ಲಿ ಕೇವಲ 25 ಸಾವಿರಕ್ಕೆ ಟಿಸಿ ಸಿಗುತ್ತಿತ್ತು. ಈ ಎಲ್ಲಾ ರೀತಿಯಲ್ಲಿ ಗಮನಸಿದರೂ ಕೇಂದ್ರಕ್ಕೆ ಹೋಗಿರುವ ಕುಮಾರಣ್ಣ ಅನಿವಾರ್ಯ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಹಿನ್ನಲೆ ಕಳೆದ ಚುನಾವಣೆಯಲ್ಲಿ ಕೆಲ ತಿಂಗಳಲ್ಲಿ ಬಂದ ನಾಗರಾಜು ಅವರು 43 ಸಾವಿರ ಮತ ಪಡೆದಿದ್ದು ಗಟ್ಟಿ ಕಾರ್ಯಕರ್ತರ ಕೊಡುಗೆ. ಯುವಶಕ್ತಿಯನ್ನು ಒಗ್ಗೂಡಿಸಿ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಅಡಿಪಾಯ. ಮುಂದಿನ ಸ್ಥಳೀಯ ಚುನಾವಣೆ ಬಗ್ಗೆ ಗಮನಹರಿಸಿ ಎಂದು ಮುಖಂಡರಿಗೆ ಸೂಚಿಸಿ ಗುಬ್ಬಿ ಇವತ್ತು ಮಾತ್ರ ಬಂದಿದ್ದೇನೆ ಅಷ್ಟೇ ಎಂದು ತಿಳಿಯಬೇಡಿ. ಮುಂದಿನ ಚುನಾವಣೆಯಲ್ಲಿ ನಾಗರಾಜು ಅವರನ್ನು ಶಾಸಕರನ್ನಾಗಿ ಮಾಡುವ ನಿಟ್ಟಿನಲ್ಲಿ ನಿರಂತರ ಪ್ರವಾಸ ಕೈಗೊಳ್ಳುತ್ತೇವೆ. ಬೂತ್ ಮಟ್ಟದಲ್ಲಿ 15 ಜನರ ಸಮಿತಿ ರಚಿಸಿ ಸಂಘಟನೆ ಕೆಲಸ ಆರಂಭಿಸಿ ಎಂದು ಕರೆ ನೀಡಿದರು.
ಸಿಎಲ್ ಪಿ ನಾಯಕ ಶಾಸಕ ಸಿ.ಬಿ.ಸುರೇಶಬಾಬು ಮಾತನಾಡಿ ಗುಬ್ಬಿ ತಾಲ್ಲೂಕಿನಲ್ಲಿ ಜೆಡಿಎಸ್ ಇನ್ನೂ ಶಕ್ತಿಯುತವಾಗಿದೆ. ಮೂಲ ಕಾರ್ಯಕರ್ತರ ಸಂಖ್ಯೆ ಬಹಳ ಜನ ಇದ್ದಾರೆ. ಎಲ್ಲಾ ಕಾರ್ಯಕರ್ತರ ಸಂಘಟನೆ ನಡೆಸಿ ಜಾತ್ಯತೀತ ಮನೋಭಾವ ಬೀರಬೇಕು. ಎಲ್ಲಾ ವರ್ಗದ ಜಾತಿ, ಧರ್ಮ ಜನರನ್ನು ಒಗ್ಗೂಡಿಸಿ ಮುನ್ನಡೆಯಬೇಕು. ಒಂದು ಸಮುದಾಯ ನಂಬಿ ಚುನಾವಣೆ ಮಾಡಲಾಗದು ಎಂದ ಅವರು ಯುವಕರಿಗೆ ಉದ್ಯೋಗ ನೀಡದ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಯೋಜನೆ ಮುಂದಿಟ್ಟು ಅಬಿವೃದ್ದಿ ಮರೆತಿದೆ. ಆರ್ ಸಿಬಿ ವಿಜಯೋತ್ಸವ ಕಾರ್ಯಕ್ರಮ ಮೂಲಕ ಯುವಕರನ್ನು ಸೆಳೆಯುವ ಕಾಂಗ್ರೆಸ್ ತಂತ್ರಕ್ಕೆ ಅಮಾಯಕರ ಬಲಿಯಾಗಿದೆ. ಬೇಸತ್ತ ಯುವ ಜನಾಂಗ ಜೆಡಿಎಸ್ ಒಲವು ತೋರಿದ್ದಾರೆ. ಇದನ್ನು ಗ್ಯಾರಿ ಎಂದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜ್ ಮಾತನಾಡಿ ಹೊಸ ಹುರುಪಿನಿಂದ ಜೆಡಿಎಸ್ ಜನರೊಂದಿಗೆ ಹೊರಟಿದೆ. ಸಂಘಟನೆಯ ಜವಾಬ್ದಾರಿ ನಿಖಿಲ್ ಕುಮಾರಸ್ವಾಮಿ ಹೊತ್ತಿದ್ದಾರೆ. ಈ ಕಾರ್ಯಕ್ರಮ ಜೆಡಿಎಸ್ ಮುಗಿದು ಹೋಯ್ತು ಎಂದ ಜನರಿಗೆ ಉತ್ತರವಾಗಿದೆ. ಗುಬ್ಬಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ ನಡೆದಿಲ್ಲ. ರಸ್ತೆಗಳು ಯಾವುದೂ ಸರಿಯಿಲ್ಲ. ಬೆಂಬಲಿಗರಿಗೆ ಗುತ್ತಿಗೆ ನೀಡಿ ಕಳಪೆ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ತಳಮಟ್ಟದ ಸಂಘಟನೆ ಇಂದಿನಿಂದ ಆರಂಭ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಪಕ್ಷದ ಬುನಾದಿ ಎನಿಸಿದ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಆಗಬೇಕಿದೆ. ಬೂತ್ ಮಟ್ಟದಲ್ಲಿ ಕಮಿಟಿ ರಚಿಸಿ ಜವಾಬ್ದಾರಿ ಕೆಲಸ ಮಾಡುವಂತೆ ಮಾಡಬೇಕಿದೆ. ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸ ಎಲ್ಲಾ ಮುಖಂಡರು ಮಾಡಿದಲ್ಲಿ ಸಂಘಟನೆ ಅದ್ಬುತವಾಗಿ ನಡೆಯಲಿದೆ ಎಂದ ಅವರು ಹೇಮಾವತಿ ನೀರಾವರಿ ಹೋರಾಟಕ್ಕೆ ಜೆಡಿಎಸ್ ಮುಂಚೂಣಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಜಿ.ಎಂ.ಶಿವಲಿಂಗಯ್ಯ, ಸುರೇಶಗೌಡ, ಯೋಗಾನಂದಕುಮಾರ್, ಕರಿಯಪ್ಪ, ಸಿದ್ದಗಂಗಮ್ಮ, ಯಲ್ಲಪ್ಪ, ಕೃಷ್ಣಮೂರ್ತಿ, ಬಸವರಾಜ್, ಕುಸುಮ ಇತರರು ಇದ್ದರು.