ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನಡೆದ ಬೃಹತ್ ರೈತ ಹೋರಾಟದಲ್ಲಿ ಪಾಲ್ಗೊಂಡು ನೀರಿಗಾಗಿ ಜೀವ ಕೊಡಲು ಸಿದ್ದರಿದ್ದ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಜೈಲು ಸೇರಿದ್ದರು. ಕೆಲ ದಿನಗಳ ಸೆರೆಮನೆ ವಾಸ ಅನುಭವಿಸಿ ಹೊರ ಬಂದ ನಾಲ್ವರು ಹೋರಾಟಗಾರರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮ ನಾಗರೀಕರು ಆಯೋಜಿಸಿದರು.
ಗುಬ್ಬಿ ಪಟ್ಟಣದ ಗುಬ್ಬಿ ವೀರಣ್ಣ ಸರ್ಕಲ್ ಬಳಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ನೀರಿಗಾಗಿ ಹೋರಾಟ ನಡೆಸಿ ಜೈಲು ಸೇರಿ ಹೊರ ಬಂದ ಆನಂದ್, ಶರತ್, ಲೋಕೇಶ್, ಚೇತನ್ ಈ ಹೋರಾಟಗಾರರಿಗೆ ಹಾಗೂ ಇವರ ಪರ ಕಾನೂನು ಹೋರಾಟ ನಡೆಸಿದ ವಕೀಲ ಎಂ.ಡಿ.ಸುರೇಶ್ ಇವರಿಗೆ ನಾಗರೀಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹೇಮಾವತಿ ನೀರಿಗಾಗಿ ಸಾವಿರಾರು ರೈತರು ಹೋರಾಟಕ್ಕೆ ಧುಮುಕಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸುವ ಹೋರಾಟ ಹತ್ತಿಕ್ಕುವ ಕೆಲಸ ಪೊಲೀಸರನ್ನು ಬಳಸಿ ಸರ್ಕಾರ ಆಡಳಿತ ಅಧಿಕಾರ ದುರ್ಬಳಕೆ ಮಾಡಿತ್ತು. ಇದನ್ನು ಸಹಿಸದ ರೈತರು ಕೆಲ ಕಾಲ ಆಕ್ರೋಶ ಹೊರ ಹಾಕಿದ ಸಮಯ ಹೇಮಾವತಿ ಹೋರಾಟಗಾರರ ವಿರುದ್ಧ ಕೇಸು ದಾಖಲಿಸಿ ಕೆಲವರನ್ನು ಜೈಲಿಗೆ ಕಳಿಸಲಾಗಿತ್ತು. ಯಾವುದೇ ಅಪರಾಧ ಕೃತ್ಯ ಮಾಡದೆ ನಮ್ಮ ಜನರ ನೀರು ಉಳಿಸಲು ಜೈಲಿಗೆ ಹೋದ ಹಿನ್ನಲೆ ನಾಗರೀಕರಿಂದ ಸನ್ಮಾನ ಆಯೋಜಿಸಲಾಗಿತ್ತು.
ಈ ವೇಳೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಪಿ.ಬಿ.ಚಂದ್ರಶೇಖರ್ ಬಾಬು, ಸಿ.ಆರ್.ಶಂಕರಕುಮಾರ್, ಪಪಂ ಸದಸ್ಯರಾದ ಶಿವಕುಮಾರ್, ಕೃಷ್ಣಮೂರ್ತಿ, ಪಂಚಾಕ್ಷರಿ, ಯತೀಶ್, ಸಿದ್ದರಾಮಯ್ಯ, ಪ್ರಮೋದ್, ಅಖಿಲೇಶ್ ಇತರರು ಇದ್ದರು.