ಇಂದಿನ ಸಂಶೋಧನಾತ್ಮಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೃತ್ತಿಪರ ಕೋರ್ಸ್ ಗಳು ಸೇರಿದಂತೆ ವಿವಿಧ ವಲಯಗಳಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ತೇರ್ಗಡೆಯಾದರೂ ನಿರುದ್ಯೋಗದ ಸಮಸ್ಯೆ ಸಾಮಾನ್ಯವಾಗಿದೆ ಈ ನಿಟ್ಟಿನಲ್ಲಿ ಕಲಿಯುವ ಹಂತದಲ್ಲಿಯೇ ವೃತ್ತಿಪರವಾಗಿ ಹೊಸ ಹೊಸ ಉದ್ದಿಮೆಗಳನ್ನು ಸ್ಥಾಪಿಸಿ ಅನೇಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿಯೇ ಪ್ರಾಧ್ಯಾಪಕರುಗಳು ಹೊಸ ಉದ್ದಿಮೆಗಳ ಬಗ್ಗೆ ಅಧ್ಯಯನ ನಡೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ತೋರಿದರೆ ನವ ಉದ್ಯೋಗದ ಉದ್ಯಮ ಸ್ಥಾಪನೆಯಾದಂತಾಗುತ್ತದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರು ತಿಳಿಸಿದರು.
ತುಮಕೂರು ನಗರ ಹೊರವಲಯದ ಕ್ಯಾತ್ಸಂದ್ರ ಟೋಲ್ ಬಳಿ ಇರುವ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಸ್ಟಾರ್ಟ್ ಆಫ್ ತುಮಕೂರು ಇವರ ಸಹಯೋಗದೊಂದಿಗೆ ಪ್ಯಾಕಲ್ಟಿ ಉದ್ಯಮಶೀಲತಾ ಶೃಂಗಸಭೆ 2025 ಕಾರ್ಯಾಗಾರದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ವಿವಿಧ ವಿಭಾಗದ ಪ್ರಾಧ್ಯಾಪಕರುಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಹಾಲಪ್ಪ ತುಮಕೂರು ನಗರ ವೇಗವಾಗಿ ಬೆಳೆಯುತ್ತಿದ್ದು ಜನಸಂಖ್ಯಾಧಾರಿತವಾಗಿ ಉದ್ಯೋಗಗಳು ಹೆಚ್ಚಾಗಬೇಕಿದೆ ಈಗಾಗಲೇ ಅನೇಕ ಸ್ಟಾರ್ಟ್ ಆಫ್ ಕಂಪನಿಗಳು ತಲೆಯೆತ್ತಿದ್ದು, ಐಟಿ, ಬಿಟಿ ಕಂಪನಿಗಳು ಇಲ್ಲಿ ನೆಲೆಗೊಳ್ಳಲಿದೆ ಈ ಹಿನ್ನೆಲೆಯಲ್ಲಿ ತುಮಕೂರಿನ ವಿವಿಧ ಉದ್ಯಮಿಗಳು ಕೈಗಾರಿಕಾ ಕ್ಷೇತ್ರದ ಪ್ರಮುಖರು ಪ್ರಾಧ್ಯಾಪಕರುಗಳಿಗೆ ನವ ಉದ್ಯಮ ಸೃಷ್ಟಿಯ ಬಗ್ಗೆ ಅದರ ಕಾರ್ಯ ಚಟುವಟಿಕೆ ಬಗ್ಗೆ ತಿಳಿಸಿಕೊಟ್ಟರೆ ಈ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಗಿದ ಕೂಡಲೇ ಸ್ವಯಂ ಉದ್ಯೋಗಿಗಳಾಗಿ ರೂಪಗೊಳ್ಳಲು ಪೂರಕವಾದ ಮಾರ್ಗದರ್ಶನ ಸಲಹೆಯನ್ನು ನೀಡುತ್ತಾರೆ ಆಗ ನಿರುದ್ಯೋಗದ ಸಮಸ್ಯೆಗೆ ಇತಿಶ್ರೀ ಹಾಡಬಹುದ. ಪ್ರಾಧ್ಯಪಕರುಗಳಿಗೆ ಈ ರೀತಿಯ ಕಾರ್ಯಕ್ರಮ, ಚರ್ಚೆ ಕಾರ್ಯಾಗಾರ ರೂಪಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಸಲಹೆಗಾರ ಡಾ. ವಿವೇಕ್ ವೀರಯ್ಯ ಮಾತನಾಡಿ ಇಂದಿನ ಯುವ ಜನರು ಫ್ಯಾಷನ್ ಓದಿಗಷ್ಟೇ ಸೀಮಿತವಾಗಿದ್ದು ವೃತ್ತಿಪರತೆಯ ಕೋರ್ಸ್ ಗಳನ್ನು ಹೊಂದಿ ವಿವಿಧ ಉದ್ಯೋಗವಕಾಶಗಳನ್ನು ಪಡೆಯಬಹುದಾಗಿದೆ. 20 ವರ್ಷಗಳ ಹಿಂದಿನ ಶಿಕ್ಷಣ ವ್ಯವಸ್ಥೆಗೆ ಇಂದಿಗೂ ಅಜಾಗಜಾಂತರ ವ್ಯತ್ಯಾಸ, ಅಭಿವೃದ್ಧಿಗಳು ಕಂಡು ಬಂದಿದ್ದು ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ತಮಗೆ ಇಷ್ಟವಾದ ಉದ್ಯೋಗವನ್ನು ಗಟ್ಟಿಮಾಡಿಕೊಳ್ಳುವ ಸದವಕಾಶವನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆ, ಕೈಗಾರಿಕೆ ಮತ್ತು ಕಂಪನಿಗಳು ಅವಕಾಶ ಕಲ್ಪಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮಾಜಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಶ್ರೀಕಂಠೇಶ್ವರ ಸ್ವಾಮಿ ಮಾತನಾಡಿ ನವ ಉದ್ಯಮ ಸೃಷ್ಟಿಗೆ ಪೂರಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನವರು ಉದ್ಯೋಗಾವಕಾಶಗಳ ತರಬೇತಿ ಸೆಂಟರ್, ನವತಂತ್ರಜ್ಞಾನ ಮಾದರಿಯ ಕಂಪನಿಗಳು ಕಾರ್ಯನಿರ್ವಹಣೆ ಬಗ್ಗೆ ಕೈಗಾರಿಕಾ ಕ್ಷೇತ್ರದ ನುರಿತ ತಜ್ಞರನ್ನು ನಿಯೋಜಿಸಿ ಪ್ರಾಧ್ಯಾಪಕರುಗಳಿಗೆ ತರಬೇತಿ ನೀಡುವುದರಿಂದ ಶೈಕ್ಷಣಿಕವಾಗಿ ಕಲಿಯುವ ಹಂತದಲ್ಲಿ ವಿದ್ಯಾರ್ಥಿಗಳನ್ನು ಕೈಗಾರಿಕಾ ವಲಯದತ್ತ ಮುಖ ಮಾಡುವಂತೆ ಪ್ರಾಧ್ಯಾಪಕರುಗಳು ಉತ್ತೇಜನ ನೀಡಲಿದ್ದಾರೆ ಎಂದು ತಿಳಿಸಿದರು.

ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಲ್ ಸಂಜೀವ್ ಕುಮಾರ್ ಮಾತನಾಡಿ ಉದ್ಯೋಗ ಮತ್ತು ಉದ್ಯೋಗವಕಾಶಗಳ ಬಗ್ಗೆ ನಮ್ಮ ಸಿಬ್ಬಂದಿಗಳಿಗೆ ವಿವಿಧ ಕೈಗಾರಿಕಾ ವಲಯದ ಸಂಪನ್ಮೂಲ ವ್ಯಕ್ತಿಗಳು ಕೈಗಾರಿಕಾ ಕಾರ್ಯ ನಿರ್ವಹಣೆ ಸೇರಿದಂತೆ ಮಾನವ ಸಂಪನ್ಮೂಲ ವಿಚಾರವಾಗಿ ಕಾರ್ಯಗಾರದಲ್ಲಿ ತಿಳಿಸಿಕೊಟ್ಟಿದ್ದು ನಮ್ಮ ಪ್ರಾಧ್ಯಾಪಕರುಗಳು ಈ ವಿಚಾರವನ್ನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಮುಂದಿನ ದಿನಗಳಲ್ಲಿ ಸ್ವಯಂ ಉದ್ಯೋಗ ಸ್ಥಾಪಿಸಿ ಭವಿಷ್ಯ ಕಟ್ಟಿಕೊಳ್ಳುವ ಕನಸನ್ನ ರೂಪಿಸಿದ್ದಾರೆ ಎಂದು ತಿಳಿಸಿದರು.
ಈರುಳ್ಳಿ ಆನಿಯನ್ ಟೆಕ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ವಿನಾಯಕ ನಂಜುಂಡಪ್ಪ ಮಾತನಾಡಿ ಶಿಕ್ಷಣ ಮುಗಿದ ಮೇಲೆ ಉದ್ಯೋಗಾವಕಾಶಗಳ ಬಗ್ಗೆ ಇರುವ ಗೊಂದಲ ಮತ್ತು ಸವಾಲುಗಳನ್ನು ತಿಳಿಗೊಳಿಸಲು ಈ ಕಾರ್ಯಗಾರವನ್ನ ಆಯೋಜನೆ ಮಾಡಿದ್ದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಂತಹ ತರಹೇವಾರಿ ಶೈಕ್ಷಣಿಕ ಕೋರ್ಸ್ ಗಳಿದ್ದು ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿಯೇ ತಮ್ಮ ಉದ್ಯೋಗವನ್ನು ಗಟ್ಟಿ ಮಾಡಿಕೊಳ್ಳಲು ಇಂತಹ ಕಾರ್ಯಗಾರ ಉಪಯೋಗವಾಗಲಿದೆ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಿಇಓ ಡಾ.ಸತೀಶ್ ಎಂ ಭಾವಾಂಕರ, ಡಾ ಮಿತ್ತ್ ಶೇಖರಗೌಡ ಲ, ಚೇಂಜ್ ಪೇ ಫೌಂಡರ್ ದಯಾವಿಕ್, ಸ್ಟಾಪ್ ತುಮಕೂರು ಫೌಂಡರ್ ಸೂರತ್ ಉಜ್ಜಿನಿ, ರುದ್ರ ಆರಾಧ್ಯ, ಪ್ಲೇಸ್ಮೆಂಟ್ ಸೆಲ್ ರಾಜೇಶ್ ಎಚ್ಎಮ್ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಪ್ರಾಧ್ಯಾಪಕರುಗಳು ಹಾಗೂ ಇತರರು ಉಪಸ್ಥಿತರಿದ್ದರುನಿರ್ದೇಶಕರಾ