“ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿ ವತಿಯಿಂದ “ವಕ್ಫ್ ತಿದ್ದುಪಡಿ ಕಾಯಿದೆ – 2025” ನ್ನು ವಿರೋಧಿಸಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ಮುಖೇನ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆ 2025 ಅಸಂವಿಧಾನಿಕವಾಗಿದ್ದು ಅದು ಮುಸ್ಲಿಮ್ ಸಮುದಾಯದ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ. ಈ ತಿದ್ದುಪಡಿ ಕಾಯಿದೆಯನ್ನು ವಾಪಾಸು ಪಡೆಯಬೇಕೆಂದು ಆಗ್ರಹಿಸಲಾಯಿತು.
“ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿ ನಿಯೋಗದಲ್ಲಿ ಮುಹಮ್ಮದ್ ಮೌಲ, ಸಹಬಾಳ್ವೆಯ ಸಂಚಾಲಕರಾದ ಪ್ರೊ.ಫಣಿರಾಜ್, ಸುಬಾನ್ ಹೊನ್ನಾಳ, ಇಸ್ಮಾಯಿಲ್ ಕಟಪಾಡಿ, ರಫೀಕ್ ಕುಂದಾಪುರ, ಮುಹ್ಮದ್ ಫೈಜ್, ಶಫಿ ಕಾಝಿ, ಜಿ.ಎಮ್ ಶರೀಫ್, ಅಝೀಜ್ ಉದ್ಯಾವರ, ಶೇಖ್ ಸಯ್ಯದ್ ಫರೀದ್, ಯಾಸೀನ್ ಕೋಡಿಬೆಂಗ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
