ಬಳ್ಳಾರಿ | ಜಾನಪದ ಎಂಬುದು ಸಾವಿಲ್ಲದ ಗಾಯನ: ಟಿಎಚ್‌ಎಂ ಬಸವರಾಜ್

Date:

Advertisements

ಜಾನಪದ ಎಂಬುದು ಸಾವಿಲ್ಲದ ಸಾಂಸ್ಕೃತಿಕ ಪಳೆಯುಳಿಕೆ. ಕಲಿತವರು ಕಲಿಯದವರಿಗೆ ಕಲಿಸುವುದೇ ಜಾನಪದ. ಹಳ್ಳಿಗಳಲ್ಲಿ ತಳ ಸಮುದಾಯದಿಂದ ಬಂದಿರುವ ಜಾನಪದ ಕಲೆ ಇಂದು ನಶಿಸಿ ಹೋಗುತ್ತಿದೆ. ಅಕ್ಷಯ ಕಲಾ ಟ್ರಸ್ಟ್ ಈ ಉದ್ಯಾನವನದಲ್ಲಿ ಜಾನಪದ ಸಂಭ್ರಮವನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದು ಇತಿಹಾಸ ಅಕಾಡೆಮಿಯ ಅಧ್ಯಕ್ಷ ಟಿಎಚ್‌ಎಂ ಬಸವರಾಜ್ ಅಭಿಪ್ರಾಯಪಟ್ಟರು.

ಬಳ್ಳಾರಿ ನಗರದ ಕೋಟೆ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಬುದ್ಧ ವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಅಕ್ಷಯ ಕಲಾ ಟ್ರಸ್ಟ್ ಹೊಸ ಎರಗುಡಿ ಇವರು ಹಮ್ಮಿಕೊಂಡ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಬಳ್ಳಾರಿಯ ಈ ಉದ್ಯಾನದಲ್ಲಿ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಮಹಾನಗರ ಪಾಲಿಕೆಯ ಹೆಮ್ಮೆಯ ವಿಷಯ. ಇಲ್ಲಿ ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

Advertisements

ಈ ಸುದ್ದಿ ಓದಿದ್ದೀರಾ? ಗುಬ್ಬಿ | ಗ್ರಾಪಂ ಆಡಳಿತಕ್ಕೆ ಜೂನ್ 18 ರಂದು ತರಬೇತಿ ಕಾರ್ಯಾಗಾರ : ತಾಪಂ ಇಒ ಶಿವಪ್ರಕಾಶ್

ಡಾ. ಬಾಬು ಜಗಜೀವನ್ ರಾಮ್ ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, “ಬುದ್ಧ ತತ್ವ, ಬಸವಣ್ಣ ವಚನ ಹಾಗೂ ಅಂಬೇಡ್ಕರ್ ಸಂವಿಧಾನದ ಕುರಿತು ಸವಿವರವಾಗಿ ತಿಳಿಸುತ್ತ ಆಚರಣೆಯಲ್ಲಿ ಅವುಗಳನ್ನು ತರಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯವಶ್ಯಕ” ಎಂದ ಅವರು, ಬುದ್ಧವನ ನಿರ್ಮಿಸಲು ಸಹಕರಿಸಿದ ಮಹಾನಗರ ಪಾಲಿಕೆ ಮತ್ತು ಬುಡಾ ಅಧಿಕಾರಿಗಳನ್ನು ಅಭಿನಂದಿಸಿದರು.

ಜಯಪ್ಪ ಮತ್ತು ತಂಡದವರಿಂದ ಸಮೂಹ ನೃತ್ಯ, ಎಚ್ ರಮೇಶ್ ಮತ್ತು ತಂಡದವರಿಂದ ಜಾನಪದ ಸಂಗೀತ ನಡೆಯಿತು. ಎಚ್ ಜಿ ಸುಂಕಪ್ಪ, ಹೆಚ್ಚಿನ ಆನಂದ್ ಕಲುಕಂಬ, ಹೇಮಂತ್ ಜಂಬೆ, ಲೋಕೇಶ್ ತಿಮ್ಮರಾಜ್ ಹಾಗೂ ಕಲಾವಿದರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

Download Eedina App Android / iOS

X