ತಾಂತ್ರಿಕ ದೋಷ ಮತ್ತು ವಿಮಾನಗಳ ಲಭ್ಯತೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ 6 ಬೋಯಿಂಗ್ ಡ್ರೀಮ್‌ಲೈನರ್ 787-8 ಒಳಗೊಂಡು ಒಟ್ಟು ಏಳು ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ದುರಂತದ ಬಳಿಕ ಏರ್ ಇಂಡಿಯಾ ತನ್ನ ವಿಮಾನಗಳಲ್ಲಿ ಅದರಲ್ಲೂ ವಿಶೇಷವಾಗಿ ಅದರ ಬೋಯಿಂಗ್ 787 ಡ್ರೀಮ್‌ಲೈನರ್ ಫ್ಲೀಟ್‌ನ ಸುರಕ್ಷತಾ ತಪಾಸಣೆಗಳನ್ನು ಹೆಚ್ಚಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂಗಾರು ಮಳೆಗೆ ಸರ್ಕಾರ ಸಿದ್ಧವಿದೆಯೇ?
ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ಅವರನ್ನು ಆದಷ್ಟು ಬೇಗ ಅವರು ತೆರಳಬೇಕಾದ ಜಾಗಗಳಿಗೆ ಅವರನ್ನು ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ನಾವು ಹೋಟೆಲ್ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದೇವೆ. ಮರುಪಾವತಿ ಅಥವಾ ಉಚಿತ ಮರುಹೊಂದಿಸುವಿಕೆಯನ್ನು ಸಹ ನೀಡುತ್ತಿದ್ದೇವೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರದ್ದುಗೊಂಡ ವಿಮಾನಗಳು
AI915 – ದೆಹಲಿ – ದುಬೈ – B788 ಡ್ರೀಮ್‌ಲೈನರ್
AI153 – ದೆಹಲಿ – ವಿಯೆನ್ನಾ – B788 ಡ್ರೀಮ್‌ಲೈನರ್
AI143 – ದೆಹಲಿ – ಪ್ಯಾರಿಸ್ – B788 ಡ್ರೀಮ್‌ಲೈನರ್
AI159 – ಅಹಮದಾಬಾದ್ – ಲಂಡನ್ – B788 ಡ್ರೀಮ್‌ಲೈನರ್
AI170 – ಲಂಡನ್ – ಅಮೃತಸರ – B788 ಡ್ರೀಮ್‌ಲೈನರ್
AI133 – ಬೆಂಗಳೂರು – ಲಂಡನ್ – B788 ಡ್ರೀಮ್‌ಲೈನರ್
AI179 – ಮುಂಬೈ – ಸ್ಯಾನ್ ಫ್ರಾನ್ಸಿಸ್ಕೋ – B777