ಕೊಪ್ಪಳ | ರಸ್ತೆಯುದ್ದಕ್ಕೂ ರಾರಾಜಿಸುತ್ತಿರುವ ಗುಂಡಿಗಳು; ಜನಪ್ರತಿನಿಧಿಗಳ ನಿರ್ಲಕ್ಷ್ಯ, ಕೆರೆಯಂತಾದ ರಸ್ತೆ

Date:

Advertisements

ಮನುಷ್ಯ ಯಾಂತ್ರಿಕ ಜೀವನಕ್ಕೆ ತನ್ನನ್ನು ತಾನು ತೊಡಗಿಸಿಕೊಳುತ್ತಿದ್ದಾನೆ. ಅದರ‌ ಜೊತೆ ಹೊಂದಾಣಿಕೆಯನ್ನೂ ಮಾಡಿಕೊಳ್ಳುತ್ತಿದ್ದಾನೆ. ಅದಕ್ಕೆ ಕೆಲವು ಅನುಕೂಲಗಳನ್ನು ಬಯಸುತ್ತಾನೆ. ಪ್ರಸ್ತುತ ದಿನಮಾನದಲ್ಲಿ ವಾಹನವಿಲ್ಲದೆ ಮನೆಯಾಚೆ ಹೊರಡುವದೇ ಇಲ್ಲ. ಹೆಚ್ಚು ದ್ವಿಚಕ್ರ ವಾಹನಗಳನ್ನು ಅವಲಂಭಿಸಿದ್ದಾರೆ. ಆದರೆ ಅದಕ್ಕೆ ಸುಸಜ್ಜಿತವಾದ ರಸ್ತೆ ಇಲ್ಲವೆಂದರೆ ಅವರಿಗೆ ಕಿರಿಕಿರಿ ಆಗುತ್ತದೆ. ಕೊಪ್ಪಳ ತಾಲುಕಿನ ಕೊನೆಯ ಹಳ್ಳಿ ಬೆಳಗಟ್ಟಿ ಪುಟ್ಟ ಗ್ರಾಮ. ಹಟ್ಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುತ್ತದೆ. ದಶಕಗಳಿಂದಲೂ ಸುರಕ್ಷಿತ ರಸ್ತೆಯಿಲ್ಲದೆ ವಂಚಿತವಾಗಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೆಸರಲ್ಲಿ ಕಾರ್ಖಾನೆಗಳು ಬರುತ್ತಿವೆ. ಆದರೆ, ನಾಗರಿಕ ವಾಹನ ಸಂಚರಿಸುವ ರಸ್ತೆಯಲ್ಲಿ ಗುಂಡಿ ತೋಡುತ್ತಿವೆ. ಇದಕ್ಕೊಂದು ಉದಾಹರಣೆ ಕೊಪ್ಪಳದಿಂದ ಸುಮಾರ‌ 25 ಕಿಲೋಮೀಟರ್ ದೂರ ಹಾಗೂ ಮುಡರಗಿಯಿಂದ‌ ಕೇವಲ 6 ಕಿಲೋಮೀಟರ್ ದೂರವಿರುವ ಬೆಳಗಟ್ಟಿ ಗ್ರಾಮ, ತಾಲೂಕಿನ ಕಡೆಯ ಹಳ್ಳಿ. ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಅದರಲ್ಲೂ ಗ್ರಾಮದ ಮಧ್ಯ ಭಾಗದಲ್ಲಿ ಹಾದುಹೋಗುವ ದಾರಿ ಕೆಟ್ಟು ಹೋಗಿದೆ. ಸರ್ಕಾರಿ ಬಸ್, ಖಾಸಗಿ ವಾಹನ ಹಾಗೂ ಆಟೋ ಚಲಿವಾಗ ಗುಂಡಿಯೊಳಗೆ ಹಾರಿಯೇ ಮೇಲೆದ್ದು ಹೋಗಬೇಕು. ಇದಕ್ಕೆ ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯೂ ಕೂಡ ಇತ್ತ ಕಣೆತ್ತಿ ನೋಡುತ್ತಿಲ್ಲ‌ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

“ಕಲ್ಯಾಣ ಕರ್ಣಾಟಕದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದರೂ ಅದರ ಸದ್ಬಳಕೆ ಮಾತ್ರ ಆಗುತ್ತಿಲ್ಲ. ಅನುದಾನವೆಲ್ಲಾ ಯಾರ್ಯಾರದ್ದೋ ಜೇಬು ಸೇರುತ್ತಿದೆ. ಹೀಗಾದರೆ ಗುಂಡಿ ಮುಚ್ಚುವವರಾದರೂ ಯಾರು? ಧೂಳಿನಲ್ಲೇ ಜೀವನ ನಡೆಸುತ್ತಿರುವ ನಮ್ಮಂಥವರ ಗೋಳು ಕೇಳೋಕೂ ಯಾರೂ ಇಲ್ಲ” ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisements

“ಇಲ್ಲಿಯವರೆಗೂ ಬೇಸಿಗೆ ಇತ್ತು. ರಸ್ತೆಯ ವಾಹನಗಳ ದಟ್ಟಣೆಗೆ ರಸ್ತೆಯ ಧೂಳು, ಗುಡಿಸಲು, ಸಣ್ಣಸಣ್ಣ ಅಂಗಡಿ, ಪಾದಚಾರಿಗಳಿಗೆ ಆವರಿಸುತ್ತಿತ್ತು. ಈಗ ಮಳೆಗಾಲ ಆರಂಭವಾಗಿದ್ದು, ಧೂಳು ಕಡಿಮೆಯಾಗಿದೆ. ಕೆಸರು ಹೆಚ್ಚಾಗಿದೆ. ಕೊಪ್ಪಳದಿಂದ ಮುಂಡರಗಿಗೆ ಚಲಾಯಿಸುವ ವಾಹನಗಳ ಭಾರಕ್ಕೆ ರಸ್ತೆ ದಂಡಿ ದಂಡಿಯಾಗಿ ಗುಂಡಿ ಬೀಳುತ್ತಿವೆ. ಅವುಗಳನ್ನು ಮುಚ್ಚಿಸುವ ಗೋಜಿಗೆ ಯಾರೂ ಚಿಂತಿಸುತ್ತಿಲ್ಲ. ಕೊನೆಪಕ್ಷ ಮಣ್ಣು ತುಂಬಿಸಿಯಾದರೂ ದೊಡ್ಡದಾದ ಗುಂಡಿ ಮುಚ್ಚಿಸುವ ಕೆಲಸ ಮಾಡುತ್ತಿಲ್ಲ” ಎಂಬುದು ಸ್ಥಳೀಯರ ಆರೋಪವಾಗಿದೆ.

ರಸ್ತೆ ಗುಂಡಿ 7

ವಾಹನಗಳ ದಟ್ಟಣೆ ಹೆಚ್ಚಾದಂತೆ ಸುಸಜ್ಜಿತ ರಸ್ತೆಗಳು ನಿರ್ಮಾಣವಾಗಬೇಕು. ಆದರೆ, ಇಲ್ಲಿ ಮಾತ್ರ ವಾಹನಗಳ ಓಡಾಟ ಹೆಚ್ಚಾದಂತೆಲ್ಲ ರಸ್ತೆಗಳ ಗುಂಡಿಗಳೂ ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯಿತಿ ಲೋಕೋಪಯೋಗಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆಯೇ? ಎನ್ನುವುದು ಬೆಳಗಟ್ಟಿ ಗ್ರಾಮದಲ್ಲಿ ಹಾದು ಹೋಗುವ ಪ್ರಯಾಣಿಕರ ಪ್ರಶ್ನೆಯಾಗಿದೆ.

ರಸ್ತೆ ಡಾಂಬರ್ ಕಂಡು ಅದೆಷ್ಟೋ ವರ್ಷಗಳೇ ಕಳೆದಿವೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೂ, ಬೆಳಗಟ್ಟಿ ಗ್ರಾಮದ ರಸ್ತೆ ದುರಸ್ತಿ ಮಾಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಬೇಸಿಗೆಯಲ್ಲಿ ಧೂಳು ಮೂಗಿಗೆ ರಾಚಿದರೆ ಮಳೆಗಾಲದ ಕೆಸರಿಗೆ ಕಾಲು ಜಾರಿ ಬಿದ್ದು ಸೊಂಟ ಮುರಿದುಕೊಂಡೋ, ಕಾಲು ಮುರಿದುಕೊಂಡೋ ಮನೆಯ ಬೀಳುವ ದುಃಸ್ಥಿತಿ ಎದುರಾಗಿದೆ.

ಸ್ಥಳೀಯ ನಿವಾಸಿ ಶರಣಪ್ಪ ಗೊಡಚಳ್ಳಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತಗ್ಗು ಬಿದ್ದಿರುವ ರಸ್ತೆಗಳ ಬಗ್ಗೆ ಮಾತಾಡಿದರೆ ಇಲ್ಲಿ ಅಪರಾಧಿಗಳಾಗುತ್ತೇವೆ. ಇಲ್ಲಿ ಮೂಲ ಸೌಲಭ್ಯದ ಬಗ್ಗೆ ಮಾತನಾಡಿ, ಪ್ರಶ್ನೆ ಮಾಡಿದರೆ ತಪ್ಪಾಗುತ್ತದೆ. ಹಲಗವಾಲಿಯಿಂದ ನಡೆಯುತ್ತಿರುವ ಡಾಂಬರೀಕರಣ ರಸ್ತೆ ಅವೈಜ್ಞಾನಿಕವಾದದ್ದು. ಇದರ ಬಗ್ಗೆ ಮಾತನಾಡಿದರೆ ದೇಶ ಇವನಿಂದಲೇ ಉದ್ಧಾರ ಆಗುವುದು ಅಂತ ಲೇವಡಿ ಮಾಡ್ತಾರ. ಹಿಂಗಿರಬೇಕಾದ್ರ ಊರ ಉಸಾಬರಿ ನಮಗ್ಯಾಕ್? ಅಂತ ನಮ್ಮ ಬೆಳಗಟ್ಟಿ ಜನ ಸುಮ್ಮಿರುತ್ತಾರಾ. ಆದ್ರ ನಮ್ಮೂರ ರಸ್ತೆ ಗುಂಡಿ ಬಿದ್ದರೂ ಸಾವು ಉಚಿತ ಹಾಗೂ ಖಚಿತ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆ : ಸುರೇಶ ಹಿಟ್ನಾಳ್‌ ನೂತನ ಡಿಸಿ; ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿ ನಳಿನಿ ಅತುಲ್‌ ನೇಮಕ

ಕೊಪ್ಪಳ ಜಿಲ್ಲಾ ಕೆ‌ಎಂಆರ್‌ವೇ ಅಧ್ಯಕ್ಷ ಮುದಕಪ್ಪ ಹೊಸಮನಿ ಮಾತನಾಡಿ, “ಕೊಪ್ಪಳ ಶಾಸಕರು, ಸಂಸದರು ಜಿಲ್ಲಾಧಿಕಾರಿಗಳಿಗೆ ಈ ಗ್ರಾಮ ಕಣ್ಣಿಗೆ ಬಿದ್ದಿಲ್ಲ. ತಾಲೂಕಿನ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಶಾಸಕರು ಗಮನ ಹರಿಸುತ್ತಿಲ್ಲ. ಈ ಗ್ರಾಮ‌ ಹಟ್ಟಿ ಗ್ರಾಮ ಪಂಚಾಯಿತಿಗೆ ಬರುತ್ತದೆ. ಇಲ್ಲಿ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದರೆ ಹಲ್ಲೆಗಾಳಾಗುತ್ತವೆ. ಜಿಲ್ಲೆಯ ಕೊನೆಯ ಹಳ್ಳಿ ಇದು. ಬಹಳ ನಿರ್ಲಕ್ಷ್ಯಕ್ಕೊಳಪಟ್ಟಿದೆ ಎಂಬುದೆಕ್ಕೆ ಗುಂಡಿ ಬಿದ್ದಿರುವ ರಸ್ತೆಯೇ ಇದಕ್ಕೆ ಸಾಕ್ಷಿ” ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಹಾಗೂ ತಾಲೂಕಿನ ಕೊನೆಯ ಹಳ್ಳಿಯಾದ ಬೆಳಗಟ್ಟಿ ಗ್ರಾಮದ ಅಭಿವೃದ್ಧಿ ಹಾಗೂ ಹದಗೆಟ್ಟ ರಸ್ತೆಯನ್ನು ಇನ್ನಾದರೂ ದುರಸ್ತಿ ಮಾಡಿಸುತ್ತಾರೋ ಎಂಬುದುನ್ನು ಕಾದು ನೋಡಬೇಕಿದೆ.‌ ಜನರು ಕೂಡ ಆ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

WhatsApp Image 2025 02 05 at 18.09.20 2
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X