ಸತತ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಜೇವರ್ಗಿ ತಾಲ್ಲೂಕಿನ ಗುಡೂರ ಎಸ್.ಎ.ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಚಂದ್ರಶೇಖರ ಶಿವಣ್ಣ ಹವಲ್ದಾರ (11) ಮೃತ ಬಾಲಕ. ಬಾಲಕನ ಅಜ್ಜಿ ಭಾಗಮ್ಮ ಸಿದ್ರಾಮ ಹವಲ್ದಾರ್ (55) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕ ಚಂದ್ರಶೇಖರ ಮನೆಯಲ್ಲಿ ಅಜ್ಜಿಯೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಮಳೆಯಿಂದ ನೆನೆದಿದ್ದ ಮಣ್ಣಿನ ಚಾವಣಿ ಕುಸಿದು ಬಿದ್ದು ಘಟನೆ ಸಂಭವಿಸಿದೆ ಎಂದು ಮೃತ ಬಾಲಕನ ತಂದೆ ಶಿವಣ್ಣ ಹವಾಲ್ದಾರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಪಿಡಿಒ ಶ್ರೀಕಾಂತ್ ದೊಡ್ಡಮನಿ, ಗ್ರಾಮ ಆಡಳಿತಾಧಿಕಾರಿ ರಮೇಶ ಪವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮುಸ್ಲಿಮ್, ಕ್ರೈಸ್ತರ ಗುಂಪನ್ನು ಕೊಚ್ಚಿ ಹಾಕಿ ಎಂದ ಸ್ವಾಮಿಯ ಬಂಧನ ಯಾಕಿಲ್ಲ?