ರಾಜ್ಯದಲ್ಲಿ ಆನ್‍ಲೈನ್ ಗೇಮಿಂಗ್, ಬೆಟ್ಟಿಂಗ್, ಜೂಜು ಹಾಗೂ ಇತರ ಆಟಗಳನ್ನು ನಿಷೇಧಿಸುವವರೆಗೆ ನಮ್ಮ ಕರ್ನಾಟಕ ಸೇನೆ ನಿರಂತರ ಹೋರಾಟ ನಡೆಸಲಿದೆ ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಹೇಳಿದರು.
ಬೀದರ್ ನಗರದಲ್ಲಿ ನಡೆದ ಸೇನೆಯ ಜಿಲ್ಲಾ ರೈತ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ʼಆನ್‍ಲೈನ್ ಜೂಜು ಹಾಗೂ ಬೆಟ್ಟಿಂಗ್‍ನಿಂದಾಗಿ ರಾಜ್ಯ ಹಲವು ಜಿಲ್ಲೆಯಗಳಲ್ಲಿ ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಕೆಲ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಬಹಳಷ್ಟು ಕುಟುಂಬಗಳು ಬೀದಿಗೆ ಬಂದಿವೆ. ಕಾರಣ, ಸರ್ಕಾರ ಆನ್‍ಲೈನ್ ಗೇಮ್‍ಗಳನ್ನು ನಿಷೇಧಿಸಬೇಕುʼ ಎಂದು ಒತ್ತಾಯಿಸಿದರು.
ನಮ್ಮ ಕರ್ನಾಟಕ ಸೇನೆಗೆ ಆಯ್ಕೆ :
ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕ ಹಾಗೂ ಜಿಲ್ಲಾ ರೈತ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಘಟಕಕ್ಕೆ ದತ್ತಾತ್ರೇಯ ಅಲಂಕೇರೆ, ಶಶಿಕುಮಾರ ಅಷ್ಟೂರೆ (ಉಪಾಧ್ಯಕ್ಷರು) ಮತ್ತು ಸಂತೋಷ್ ಮಳಚಾಪುರೆ (ಖಜಾಂಚಿ),
ಜಿಲ್ಲಾ ರೈತ ಘಟಕಕ್ಕೆ ರಾಜಕುಮಾರ ಸ್ವಾಮಿ (ಅಧ್ಯಕ್ಷ) ಹಾಗೂ ಹುಮನಾಬಾದ್ ತಾಲ್ಲೂಕು ಘಟಕಕ್ಕೆ ಸಚಿನ್ ತಿಬಶೆಟ್ಟೆ (ಅಧ್ಯಕ್ಷ) ಅವರನ್ನು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ : ಕಲಬುರಗಿ | ಮನೆಯ ಛಾವಣಿ ಕುಸಿದು 11 ವರ್ಷದ ಬಾಲಕ ಸಾವು
ಸಭೆಯಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಸಂಚಾಲಕ ಸುಧಾಕರ ರಾಠೋಡ್, ನಗರ ಘಟಕದ ಅಧ್ಯಕ್ಷ ಸಂತೋಷ್, ಪಾಟೀಲ್, ಬೀದರ್ ಉತ್ತರ ಘಟಕದ ಅಧ್ಯಕ್ಷ ಅನಿಲ್ ರಾಜಗೀರಾ, ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕಾರಬಾರಿ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಾಜಿ ದಾಮಾ ಮತ್ತಿತರರು ಇದ್ದರು.
ನಿಮ್ಮ ಊರು, ಸಮುದಾಯದ ಕುಂದು-ಕೊರತೆಗಳನ್ನು ʼಈದಿನ ಸಹಾಯವಾಣಿʼ ನಂಬರ್‌ಗೆ ವಾಟ್ಸಪ್ ಮಾಡಿ : 9035053805