ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಹಾಗೂ ಪೊಲೀಸ್ ಸ್ಪೇರ್ ನಡುವೆ ಅಪಘಾತವಾಗಿದ್ದು ಇಬ್ಬರು ಪೊಲೀಸ್ ಸಿಬ್ಬಂದಿಗೆ ಸಣ್ಣ ಗಾಯವಾಗಿರುವ ಘಟನೆ ಸಂಭವಿಸಿದೆ.
ಕನಕಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬೆಂಗಾವಲು ಪಡೆಯ ಕಾರಿಗೆ ಸಚಿವರ ಸ್ಪೇರ್ ಕಾರು ವೇಗವಾಗಿ ಬಂದು ಹಿಂಬದಿಗೆ ಗುದ್ದಿದೆ. ಬೆಂಗಾವಲು ಪಡೆ ವಾಹನದ ಹಿಂಬದಿ ನಜ್ಜುಗುಜ್ಜಾಗಿದೆ. ಎರಡೂ ಕಾರುಗಳ ಅಪಘಾತದ ಪರಿಣಾಮ ಚಿಕ್ಕಪುಟ್ಟ ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿ ಬೆಂಗಳೂರಿಗೆ ತೆರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಶಿರಾಡಿಘಾಟ್‌ನ ಕೆಲವೆಡೆ ಗುಡ್ಡ ಕುಸಿತ; ಕೊಚ್ಚಿ ಹೋದ ತಡೆಗೋಡೆ, ಕೈ ಕೊಟ್ಟ ವಿದ್ಯುತ್
ಸ್ಥಳಕ್ಕೆ ಕೂಡ್ಲಿಗಿ ಸಿಪಿಐ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪ್ರಾಣಾಪಾಯ ಇಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.