ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ (ಜೂ.18) ಅವರ ಕ್ಯಾಬಿನೆಟ್ ಕೊಠಡಿಯಲ್ಲಿ ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗೆ ಖಾಸಗಿ ಔತಣಕೂಟವನ್ನು ಆಯೋಜಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಬಳಿಕ, ಡೊನಾಲ್ಡ್ ಟ್ರಂಪ್ ಮತ್ತು ಅಸಿಮ್ ಮುನೀರ್ ನಡುವೆ ನಡೆಯುತ್ತಿರುವ ಮೊದಲ ಭೇಟಿ ಇದಾಗಿದೆ.
ಜೂ.14ರಂದು ನಡೆದ ಅಮೆರಿಕ ಸೇನೆಯ 250ನೇ ವಾರ್ಷಿಕೋತ್ಸವ ಆಚರಣೆಗೆ, ಪಾಕಿಸ್ತಾನ ಸೇನಾಧ್ಯಕ್ಷ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಆಹ್ವಾನ ನೀಡಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿತ್ತು. ಆದರೆ ಈಗ ಖುದ್ದು ಡೊನಾಲ್ಡ್ ಟ್ರಂಪ್ ಅವರೇ ಅಸಿಮ್ ಮುನೀರ್ ಅವರನ್ನು ಭೇಟಿ ಮಾಡುತ್ತಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ಅಧ್ಯಕ್ಷರ ದೈನಂದಿನ ಸಾರ್ವಜನಿಕ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನದ ಸೇನಾ ನಾಯಕ ಆಸಿಮ್ ಮುನೀರ್ ಇಂದು ಮಧ್ಯಾಹ್ನ 1:00 ಗಂಟೆಗೆ (ವಾಷಿಂಗ್ಟನ್ ಸಮಯ) ಶ್ವೇತಭವನದ ಕ್ಯಾಬಿನೆಟ್ ಕೊಠಡಿಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ. ಉಭಯ ನಾಯಕರು ಮಧ್ಯಾಹ್ನದ ಭೊಜನವನ್ನು ಒಟ್ಟಿಗೆ ಮಾಡಲಿದ್ದಾರೆ.
Donald Trump to meet Pak COAS General Asim Munir in Washington DC
— ANI Digital (@ani_digital) June 18, 2025
Read @ANI Story | https://t.co/0tRJ2hmBAa#DonaldTrump #Washington #AsimMunir pic.twitter.com/KIzdjx4rnp