ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ, ನೂತನ ಅಧ್ಯಕ್ಷರ, ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ” ಪದಗ್ರಹಣ ” ಕಾರ್ಯಕ್ರಮವು ಮಂಗಳವಾರ ಕಾಪು – ರಾಜೀವ್ ಭವನ ದಲ್ಲಿ, ಮಾಜಿ ಸಚಿವರು, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜ, ಮತ್ತು ಕೆಪಿಸಿಸಿ ಉಪಾಧ್ಯಕ್ಷರಾದ ಎಂ ಎ ಗಪೂರ್ ರವರ ಸಮ್ಮುಖದಲ್ಲಿ, ನಿಕಟಪೂರ್ವ ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಸನಬ್ಬ ಶೇಖ್ ರವರಿಗೆ ದ್ವಜ ಹಸ್ತಾಂತರಿಸುವ ಮೂಲಕ ಪದಗ್ರಹಣ ನಡೆಯಿತು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು, ಶಾಸಕರಾದ ಐವನ್ ಡಿಸೋಜರವರು, ಎಂ ಎ ಗಫೂರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ನೂತನ ಅಧ್ಯಕ್ಷರಿಗೆ ಮತ್ತು ಸಮಿತಿಯ ಎಲ್ಲಾ ಪಧಾದಿಕಾರಿಗಳಿಗೆ ಶುಭ ಹಾರೈಸಿ ಎಲ್ಲಾ ಪಧಾದಿಕಾರಿಗಳಿಗೆ ಆದೇಶ ಪತ್ರವನ್ನು ವಿತರಿಸಿದರು, ಕಾರ್ಯಕ್ರಮದಲ್ಲಿ ಶರ್ಫುದ್ದೀನ್ ಶೇಖ್ ರವರು ಸ್ವಾಗತಿಸಿದರು, ಸಭೆಯಲ್ಲಿ ನಾಯಕರುಗಳಾದ ಬ್ಲಾಕ್ ಅಧ್ಯಕ್ಷರಾದ ವೈ ಸುಕುಮಾರ್, ನವೀನ್ ಚಂದ್ರ ಸುವರ್ಣ, ವೆರೋನ್ಕಾ ಕರ್ನೋಲಿಯೋ, ಅನಿತಾ ಮತಾಯಿಸ್, ಗೀತಾ ವಾಗ್ಲೆ, ಎಚ್ ಅಬ್ದುಲ್ಲಾ,ನಿಯಾಜ್ ಅಹಮ್ಮದ್, ವಿಲ್ಸನ್ ರೋಡ್ರಗೀಸ್, ಶಿವಾಜಿ ಸುವರ್ಣ, ಇಸ್ಮಾಯಿಲ್ ಆತ್ರಾಡಿ, ಹಸನ್ ಶೇಖ್, ಮನ್ಸೂರ್ ಮೂಳೂರು, ಅಜೀಝ್ ಹೆಜಮಾಡಿ, ಹಮೀದ್ ಯೂಸುಫ್, ಇನ್ನಿತರ ಪಕ್ಷದ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಅಮಿರ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು, ರಮೀಜ್ ಹುಸೈನ್ ವಂದಿಸಿದರು.