ಭರತಖಂಡದ ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಭಾರತೀಯ ನಾಗರಿಕ ಸೇವಾ ಪರೀಕ್ಷೆಯು ಒಂದು. ಹಲವಾರು ಅಭ್ಯರ್ಥಿಗಳಿಗೆ ಇದು ಕಬ್ಬಿಣದ ಕಡಲೆಯಂತಾಗಿದೆ. ಅದರಲ್ಲೂ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಗಗನ ಕುಸುಮವಾಗಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಕಳೆದ 50 ವರ್ಷಗಳಲ್ಲಿ ಆಯ್ಕೆಯಾದ ಅಧಿಕಾರಿಗಳ ಸಂಖ್ಯೆಯಲ್ಲಿ ಉತ್ತರ ಭಾರತದ ಅಭ್ಯರ್ಥಿಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದವರ ಪಾಲ್ಗೊಳ್ಳುವಿಕೆ ಕೇವಲ ಬೆರಳೆಣಿಕೆಯಷ್ಟಿದೆ, ವಿಶೇಷವಾಗಿ ಕರ್ನಾಟಕದ ಅಭ್ಯರ್ಥಿಗಳಿಗೆ ಈ ಪರೀಕ್ಷೆಯನ್ನು ಎದುರಿಸಲು ಇರುವ ಸವಾಲುಗಳೇನೆಂದರೆ, ಸೂಕ್ತ ಮಾಹಿತಿಯ ಕೊರತೆ, ವಯಸ್ಸು, ವರ್ಗ, ವಿದ್ಯಾಭ್ಯಾಸ ಇತ್ಯಾದಿಗಳ ವಿವರದ ಪ್ರಶ್ನೆ ಪತ್ರಿಕೆ ಆಂಗ್ಲ…

ಮೊಹಮ್ಮದ್ ರಫೀ ಪಾಷ
ಮೊಹಮ್ಮದ್ ರಫೀ ಪಾಷ ಅವರು ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ತೆಗೆದುಕೊಳ್ಳುವ ಯುವ ಅಭ್ಯರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಸದ್ಯ ಪ್ರಸ್ತುತ ಕರ್ನಾಟಕ ಸರ್ಕಾರದ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.