ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ ನಿಯೋಗ ವರ್ಗಾವಣೆಗೊಂಡ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ಸ್ವರೂಪಾ ಅವರನ್ನು ಸ್ವಾಗತಿಸಲಾಯಿತು.
ಉಡುಪಿ ಜಿಲ್ಲಾಡಳಿತದಲ್ಲಿ ಜನಸಾಮಾನ್ಯರ ಧ್ವನಿಯಾಗಿ ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿದು ದಕ್ಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ವಿದ್ಯಾಕುಮಾರಿಯವರು ಇದೀಗ ಜಿಲ್ಲೆಯಿಂದ ವರ್ಗಾವಣೆ ಗೊಂಡಿರುತ್ತಾರೆ ಇವರ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದರು ಸಮಾನತೆ ಸಹೋದರತೆಯ ಬ್ರಾತೃತ್ವಕ್ಕೆ ಹೆಚ್ಚಿನ ಒತ್ತು ನೀಡಿ ಜಿಲ್ಲೆಯಲ್ಲಿ ಸಾಮಾಜಿಕ ಮತಿಯ ಸಾಮರಸ್ಯವನ್ನು ಕಾಪಾಡುವಲ್ಲಿ ಶ್ರಮಿಸಿದ್ದರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಂವಿಧಾನ ಜಾತ ಕಾರ್ಯಕ್ರಮು ಅಭೂತಪೂರ್ವ ಯಶಸ್ಸನ್ನು ಕಾಣುವುದರೊಂದಿಗೆ ನವೆಂಬರ್ 26 ರಂದು ಸಂವಿಧಾನ ಅರ್ಪಣ ದಿನದ ಅಂಗವಾಗಿ ಶಿರೂರು ಟೋಲ್ ಗೇಟ್ ನಿಂದ ಹೆಜಮಾಡಿವರೆಗೆ ಏಕಕಾಲದಲ್ಲಿ ಹಮ್ಮಿಕೊಂಡ ಮಾನವ ಸರಪಳಿ ಬಹಳ ಅರ್ಥ ಪೂರ್ಣವಾಗುವಲ್ಲಿ ಜಿಲ್ಲಾಡಳಿತದ ಜವಾಬ್ದಾರಿ ಮಹತ್ತರವಾಗಿತ್ತು.
14 ರ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡ ಜೈ ಭೀಮ್ ರ‌್ಯಾಲಿ ಜಿಲ್ಲಾಧಿಕಾರಿಗಳ ಕಛೇರಿಯಿಂದಲೇ ಪ್ರಾರಂಭಿಸುವಂತೆ ಹೇಳಿ ಸಮಾಜದ ಶೋಷಿತರ ಧ್ವನಿಯಾಗಿ ನಿಲ್ಲುವಂತ ಒಬ್ಬ ಜನಸಾಮಾನ್ಯರ ನೆಚ್ಚಿನ ಜಿಲ್ಲಾಧಿಕಾರಿಯಾಗಿದ್ದರು ಈ ಹಿನ್ನೆಲೆಯಲ್ಲಿ ಜನಪರ ಕಾರ್ಯಕ್ರಮಗಳನ್ನು ನಿಯೋಗವು ನೆನಸಿಕೊಂಡಿತು.
ನಿಯೋಗದಲ್ಲಿ ಪ್ರಗತಿಪರ ಚಿಂತಕರು ಜನಪರ ಹೋರಾಟಗಾರರು ಜಯನ್ ಮಲ್ಪೆ, ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ವಾಸುದೇವ ಮುದೂರು, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರು ಪರಮೇಶ್ವರ ಉಪ್ಪೂರು, ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷರು ಬಾಲಗಂಗಾಧರ ಗೌಡ, ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷರು ಗಣೇಶ್ ನೆರ್ಗಿ, ಶಿವಕುಮಾರ್ ಪರ್ಕಳ, ಹರೀಶ್ ಸಾಲ್ಯನ್, ಕಮಲಾಕ್ಷ, ನಾರಾಯಣ ಪರ್ಕಳ, ಭಗವಾನ್ ದಾಸ್, ಮೋಹನ್ ದಾಸ್, ರವಿರಾಜ್ ಉಪಸ್ಥಿತಿತರಿದ್ದರು.