ಭಾರತದ ರಾಷ್ಟ್ರಧ್ವಜವು ಭಾರತದ ಸ್ವಾತಂತ್ರ್ಯ, ಸಾರ್ವಭೌಮತ್ವದ ಪ್ರತೀಕವಾಗಿದೆ. ಈ ಧ್ವಜಕ್ಕೆ ಪ್ರತಿಯೊಬ್ಬ ಭಾರತೀಯನೂ ಗೌರವ ನೀಡಬೇಕು ಎಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಶಂಕರಪ್ಪ ಅಭಿಪ್ರಾಯಪಟ್ಟರು.
ನಗರದ ಬಿಆರ್‌ಸಿಯಲ್ಲಿ ಭಾರತ ಸೇವಾದಳ ಹಮ್ಮಿಕೊಂಡಿದ್ದ ಶಿಕ್ಷಕರ ಪುನಶ್ಚೇತನ ಶಿಬಿರ ಮತ್ತು ಭಾರತ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
“ನಮ್ಮ ರಾಷ್ಟ್ರಧ್ವಜವು 1947ರ ಜುಲೈ 22ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಸ್ತಿತ್ವಕ್ಕೆ ಬಂದು 76 ವರ್ಷಗಳು ತುಂಬಿ 77ನೇ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ರಾಷ್ಟ್ರಧ್ವಜ, ಅದರ ಇತಿಹಾಸದ ಕುರಿತು ಮಾಹಿತಿ ನೀಡಿ ಶಾಲೆಗಳಲ್ಲಿ ಈ ಆಚರಣೆಯನ್ನು ನಡೆಸಬೇಕು” ಎಂದು ಶಿಕ್ಷಕರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಯುವಜನರು ಮುಂದಾಗಬೇಕು
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸದಾಶಿವಪ್ಪ ರಾಷ್ಟ್ರಧ್ವಜವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಿ ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಬಗ್ಗೆ ತರಬೇತಿಗಳನ್ನು ಆಯೋಜಿಸುವುದು ಸೂಕ್ತವೆಂದು ತಿಳಿಸಿದರು.
ಸಂಗಮೇಶ್ ಅಧಿನಾಯಕ, ಮಂಜುನಾಥ್, ಶಿಕ್ಷಕ ಕಲ್ಲೇಶ್ ಇತರರು ಹಾಜರಿದ್ದರು.