ಮಂಗಳೂರು ನಗರದ ಜಪ್ಪಿನಮೊಗರು ಪ್ರದೇಶದ ನಾಗಲ್ಲು ಉರುಂಡೆತೋಟ ಪ್ರದೇಶದಲ್ಲಿ ವಿಪರೀತ ಮಳೆಯಿಂದ ರಾಜ ಕಾಲುವೆಯ ತಡಗೋಡೆ ನಾಶವಾಗಿದ್ದು, ಕೂಡಲೇ ಇದರ ದುರಸ್ತಿ ಕಾರ್ಯ ನಡೆಯಬೇಕೆಂದು ಜಪ್ಪಿನಮೊಗರು ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಸುಧಾಕರ್.ಜೆ. ಆಗ್ರಹಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಲ್ಲು ಗಣೇಶನಗರ, ಹೊಯ್ಗೆ ಬಝಾರ್, ವೈದ್ಯನಾಥ ನಗರ, ಬಜೆಹಿತ್ತಲು, ಅಂಗಡಿಮಾರು. ಪ್ರದೇಶಗಳಿಗೆ ಕೃತಕ ನೆರೆ ಬಂದು ಸಂಪೂರ್ಣ ಜಪ್ಪಿನಮೊಗರು ಗ್ರಾಮವೇ ಜಲಾವೃತಗೊಂಡು ಅಪಾರ ಪ್ರಮಾಣದ ಸೊತ್ತುಹಾನಿ ಉಂಟಾದ ಬಗ್ಗೆ ಹಾಗೂ ಸ್ಥಳೀಯ ಶಾಸಕರು ಹಾಗೂ ನಿಕಟಪೂರ್ವ ಕಾರ್ಪೊರೇಟರ್ ಜವಾಬ್ದಾರಿಯಿಂದ ನುಣಚಿಕೊಳ್ಳುವ ನೆಪದಲ್ಲಿ ಪತ್ರಿಕೆ ಮತ್ತು ಟಿ.ವಿ ಮಾಧ್ಯಮಗಳಿಗೆ ಅಸಂಬದ್ಧ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದರು.
ಇದನ್ನು ಓದಿದ್ದೀರಾ? ಮಂಗಳೂರು | ಪ್ರಾಪರ್ಟಿ ಕಾರ್ಡ್ ಮಾಡಿಸಲು ಲಂಚ: ಇಬ್ಬರು ಲೋಕಾಯುಕ್ತ ಬಲೆಗೆ
ಕಳೆದ 20-25 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಕಂಕನಾಡಿ ಪಂಪ್‌ವೆಲ್, ಎಕ್ಕೂರು ಮುಖಾಂತರ ಜಪ್ಪಿನಮೊಗರು ಪ್ರದೇಶದಲ್ಲಿ ಹಾದುಹೋಗುವ ರಾಜ ಕಾಲುವೆ ನಾಗಲ್ಲು ಉರುಂಡೆತೋಟ ಎಂಬಲ್ಲಿ ಸುಮಾರು 25 ಮೀಟರ್ಗಳಷ್ಟು ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದಾಗಿ ಜಪ್ಪಿನಮೊಗರು ಗ್ರಾಮದ ಹಲವಾರು ಪ್ರದೇಶಗಳು ಜಲಾವೃತಗೊಂಡು ಅಲ್ಲಿರುವ ಮನೆ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಬೆಲೆಬಾಳುವ ವಸ್ತುಗಳು ನಷ್ಟವಾಗಿದೆ. ಕಳೆದ 15 ದಿನಗಳಲ್ಲಿ ಮೂರು ನಾಲ್ಕು ಬಾರಿ ನೆರೆ ಉಂಟಾಗುತ್ತ ಇದೆ . ಈ ಕೃತಕ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೂಡಲೇ ಶಾಶ್ವತ ತಡೆಗೋಡೆ ನಿರ್ಮಾಣ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.