ಮಹಿಳೆ ನಡೆದುಕೊಂಡು ಹೋಗುವಾಗ ಸರಗಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಸಿಂಧನೂರು ಪೊಲೀಸರು ಇಬ್ಬರನ್ನು ಬಂಧಿಸಿ ರೂ.16,35,00 ಮೌಲ್ಯದ ಬೈಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳಾದ ಆರೀಪ್ (23), ಸಿದ್ದರಾಮಪ್ಪ(20), ಮತ್ತು ಅಪ್ರಾಪ್ತ ಬಾಲಕನನ್ನು ಬಂಧಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇತ್ತೀಚೆಗೆ ಒಂಟಿ ಮಹಿಳೆ ನಡೆದುಕೊಂಡು ಹೋಗುವಾಗ ಕೊರಳಲ್ಲಿನ ಬಂಗಾರದ ಸರಗಳ್ಳತನ ಮಾಡಿದ್ದ ಆರೋಪಿಗಳು ಈ ಹಿಂದೆ ಮತ್ತು ಬೈಕ್ ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದರು.
ಮಹಿಳೆಯ ಕೊರಳಲ್ಲಿ ಸುಮಾರು 2 ಲಕ್ಷ ಬೆಲೆಬಾಳುವ, 31.87 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಮಹಿಳೆ ಪ್ರಕರಣ ದಾಖಲಿಸುತ್ತಿದ್ದಂತೆ, ಎಚ್ಚೆತ್ತ ಪೋಲಿಸರು ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಹಾಗೂ ಅಪ್ರಾಪ್ತನನ್ನು ಹಿಡಿದು ಸರಗಳ್ಳತನ ಪ್ರಕರಣ ಭೇದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿದ್ಯುತ್ ವಿತರಣಾ ಕೇಂದ್ರ ಸ್ಥಳಾಂತರಕ್ಕೆ ಕೈ ಬಿಡಬೇಕು ; ರೈತ ಸಂಘ ಆಗ್ರಹ
ಇದರೊಂದಿಗೆ ಸಿಂಧನೂರು ನಗರದಲ್ಲಿ ಕಳೆದ 06 ತಿಂಗಳಿಂದ ಕಳ್ಳತನವಾದ 20 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಗಾರ ಮತ್ತು ಬೈಕ್‌ಗಳ ಒಟ್ಟು ಮೌಲ್ಯ ರೂ 16.35.000/- ಜಪ್ತಿ ಮಾಡಿಕೊಂಡು ವಿವಿಧ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಬಂಗಾರದ ಸರಗಳ್ಳತನ ಮತ್ತು ಬೈಕ್‌ಗಳನ್ನು ಕಳ್ಳತನದಲ್ಲಿ ಭಾಗಿಯಾಗಿದ್ದರು.
