ವಿಜಯನಗರದ ಹೊಸಪೇಟೆ ತಾಲೂಕಿನ ಕಮಲಾಪುರದ ಐತಿಹಾಸಿಕ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿರುವುದು ಕಂಡುಬಂದಿದೆ. ಇದರಿಂದ ಸ್ಥಳೀಯರ ಹಾಗೂ ಮೀನುಗಾರರು ಆತಂಕಿತರಾಗಿದ್ದಾರೆ.
ಕಮಲಾಪುರ ಕೆರೆಯಲ್ಲಿ ಮೀನುಗಳ ಸಾವು ಅದರಲ್ಲೂ ದೊಡ್ಡ ಮೀನುಗಳು ಸತ್ತು ದಡ ಸೇರುತ್ತಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ತಜ್ಞರ ಅಂದಾಜಿನ ಪ್ರಕಾರ, ಕಲುಷಿತ ಮಳೆಯ ನೀರು ಹಾಗೂ ರೈತರು ಬೆಳೆಗಳಿಗೆ ಬಳಸುವ ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳು ಹೊಲದಿಂದ ಹರಿದು ಬರುವ ನೀರಿನೊಂದಿಗೆ ಮಿಶ್ರಣವಾದ ಪರಿಣಾಮ ಈ ರೀತಿ ಮೀನುಗಳ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಮೀನುಗಳ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಈ ಕುರಿತು ರಾಜ್ಯ ಮಾದಿಗ ರಕ್ಷಣಾ ವೇದಿಕೆಯ ಮುಖಂಡ ಮಾತನಾಡಿ, “ಕೊಪ್ಪಳ, ಹೊಸಪೇಟೆ ಸುತ್ತಲೂ ಸ್ಥಾಪಿತವಾಗಿರು ಕೈಗಾರಿಕಾ ಕಾರ್ಖಾನೆಯ ಕಲುಷಿತ ನೀರು ತುಂಗಭದ್ರಾ ಜಲಾಶಯ ಸೇರುವುದೇ ಈ ಐತಿಹಾಸಿಕ ಕೆರೆಯ ಮೀನುಗಳ ಸಾವಿಗೆ ಕಾರಣವಾಗಿದೆ. ಮೀನು ವ್ಯಾಪಾರವನ್ನೇ ನಂಬಿದ ಮೀನುಗಾರರಿಗೆ ಇದು ತುಂಬಲಾರದ ನಷ್ಟ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯನಗರ | ಬಸ್ ನಿಲ್ದಾಣದಲ್ಲಿ, ದ್ವಿಚಕ್ರ ವಾಹನಗಳದ್ದೇ ಕಾರುಬಾರು; ಸಾರ್ವಜನಿಕರ ಪರದಾಟ!