ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಮಗು ಮೃತಪಟ್ಟಿದೆ ಎಂದು ಮಗುವಿನ ತಂದೆಯೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ.
ಫತೇಪುರ್ ಜಿಲ್ಲೆಯ ಸರ್ದಾರ್ ಆಸ್ಪತ್ರೆಯಲ್ಲಿ ಬುಧವಾರ ಘಟನೆ ನಡೆದಿದೆ. ವೈರಲ್ ವಿಡಿಯೋದಲ್ಲಿ ಮಗುವಿನ ತಂದೆ ಶಾರುಖ್ ಆಸ್ಪತ್ರೆಯ ನೆಲದ ಮೇಲೆ ಕುಳಿತು ಅಳುತ್ತಿರುವುದು ಕಂಡು ಬಂದಿದೆ.
“10 ನಿಮಿಷಗಳು ಕಳೆದಿವೆ, ಯಾರೂ ನನ್ನ ಮಗುವಿಗೆ ಆಮ್ಲಜನಕ ನೀಡಲಿಲ್ಲ, ಯಾರೂ ಅವನನ್ನು ಮುಟ್ಟಿ ನೋಡಿಲ್ಲʼ ಎಂದು ಶಾರುಖ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಭೋಪಾಲ್ | 90 ಡಿಗ್ರಿ ಕೋನದ ಮೇಲ್ಸೇತುವೆ ಮರು ವಿನ್ಯಾಸಕ್ಕೆ ಮುಂದಾದ ರಾಜ್ಯ ಸರ್ಕಾರ
ಖಗಾ ಕೊಟ್ವಾಲಿ ಪ್ರದೇಶದ ಲಖಿಪುರ್ ಗ್ರಾಮದ ನಿವಾಸಿ ಶಾರುಖ್, ತನ್ನ ಮಗುವಿನ ಆರೋಗ್ಯ ಹದಗೆಟ್ಟ ಕಾರಣ ಮಗುವನ್ನು ಖಾಗಾದಲ್ಲಿರುವ ಹಾರ್ಡೋ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ತಕ್ಷಣ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
“ಮಗುವನ್ನು ಜಿಲ್ಲಾಸ್ಪತ್ರೆಗೆ ತುರ್ತಾಗಿ ಕರೆದೊಯ್ದರೂ ಯಾವುದೇ ವೈದ್ಯರು ಮಗುವನ್ನು ಪರೀಕ್ಷೆ ನಡೆಸಿಲ್ಲ. ಆಮ್ಲಜನಕ ಬೆಂಬಲ ಅಥವಾ ಯಾವುದೇ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿಲ್ಲ. ಇದರಿಂದಾಗಿ ಮಗು ಮೃತಪಟ್ಟಿದೆ” ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಸ್ಪತ್ರೆಯ ವಿರುದ್ಧ ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
बहुत दर्दनाक है 💔
— Sachin Gupta (@SachinGuptaUP) June 18, 2025
उत्तर प्रदेश के जिला फतेहपुर में शाहरुख अपने नवजात बेटे आर्यन को लेकर जिला अस्पताल में पहुंचा। वहां उसको न डॉक्टर ने देखा, न ऑक्सीजन लगाई। 10 मिनट में ही बच्चे ने दम तोड़ दिया।@bnetshukla pic.twitter.com/3zIkYz4dh0